ಷೇರು ಮಾರುಕಟ್ಟೆಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯ ಹಿನ್ನೆಲೆಯಲ್ಲಿ ಏಷ್ಯಾದ ಶ್ರೀಮಂತ ಪಟ್ಟದಿಂದ ಮುಖೇಶ್ ಅಂಬಾನಿ ಕೆಳಗಿಳಿದಿದ್ದು, ಚೀನಾದ ಅಲಿಬಾಬಾ ಗುಂಪಿನ ಜಾಕ್ ಮಾ ಮೊದಲ ಸ್ಥಾನಕ್ಕೇರಿದ್ದಾರೆ.
ತೈಲ ದರ ಇಳಿಕೆ, ಕೊರೋನಾ ಭೀತಿಯಿಂದ ಷೇರು ಮಾರುಕಟ್ಟೆ ದಿಡೀರ್ ಕುಸಿದಿದ್ದು, ರಿಲಯನ್ಸ್ ಸೇರಿದಂತೆ ಹಲವಾರು ಕಂಪನಿಗಳ ಶೇರುಗಳು ಕುಸಿತ ಕಂಡು ಶೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿತ್ತು.
ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೆ ಏರಿರುವ ಜಾಕ್ ಮಾ 44.5 ಬಿಲಿಯನ್ ಆಸ್ತಿ ಹೊಂದಿದ್ದು, ಅಂಬಾನಿ 42 ಬಿಲಿಯನ್ ಡಾಲರ್ ನಷ್ಟು ಆಸ್ತಿ ಹೊಂದಿದ್ದಾರೆ.
2018ರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ್ದ ಮುಖೇಶ್ ಅಂಬಾನಿಯವರ ರಿಲಯನ್ಸ್ 2009 ರ ನಂತರ ಇದೇ ಮೊದಲ ಬಾರಿಗೆ ಸೋಮವಾರದಂದು ಒಂದೇ ದಿನದಲ್ಲಿ ಸುಮಾರು 42,855 ಕೋಟಿ ರೂ. ನಷ್ಟು ನಷ್ಟ ಅನುಭವಿಸಿತ್ತು.
ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ
ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...








