ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಟಾಪ್ 10 ರಿಯಲ್ ಟೈಮ್ ಶ್ರೀಮಂತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಫೋಬ್ರ್ಸ್ ಸಂಸ್ಥೆ ಬಿಡುಗಡೆ ಮಾಡಿದ 2020ರ ಬಿಲಿಯನೇರ್ ಪಟ್ಟಿಯ ಪ್ರಕಾರ ಮುಕೇಶ್ ಅಂಬಾನಿ 36.8 ಬಿಲಿಯನ್ ಡಾಲರ್ ಸಂಪತ್ತನೊಂದಿಗೆ ವಿಶ್ವದ 200 ಬಿಲಿಯನೇರ್‍ಗಳ ಪಟ್ಟಿಯಲ್ಲಿ 21 ನೇ ಸ್ಥಾನ ಪಡೆದಿದ್ದಾರೆ. ಆದರೆ, ರಿಯಲ್ ಟೈಮ್ ಟಾಪ್ ಟೆನ್ ಬಿಲಿಯನೇರ್ ಪಟ್ಟಿಯಲ್ಲಿ 64.6 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 9ನೇ ಸ್ಥಾನ ಪಡೆದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಈಗ ಸಾಲಮುಕ್ತ ಕಂಪನಿಯಾಗಿದೆ ಎಂದು ಅಂಬಾನಿ ಘೋಷಿಸಿದ ಬಳಿಕ, ಪ್ರತಿ ಷೇರಿನ ದರ ಶುಕ್ರವಾರ 1,738 ರೂ.ಗೆ ವೃದ್ಧಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್‍ಗೆ 1.61 ಲಕ್ಷ ಕೋಟಿ ರೂ. ಸಾಲ ಬಾಕಿ ಇತ್ತು. ಆದರೆ ರಿಲಯನ್ಸ್ ಸಮೂಹವು ಇತ್ತೀಚೆಗೆ 1.75 ಲಕ್ಷ ಕೋಟಿ ರೂ. ಹೂಡಿಕೆಯನ್ನು ಗಳಿಸಿದ್ದು, ಸಾಲ ಮುಕ್ತವಾಗಿದೆ. ಮುಖ್ಯವಾಗಿ ರಿಲಯನ್ಸ್ ಜಿಯೊದ ಶೇ.24.71 ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿ ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣ ಗಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‍ನ ಮಾರುಕಟ್ಟೆ ಮೌಲ್ಯವು ಶುಕ್ರವಾರ 11.52 ಲಕ್ಷ ಕೋಟಿ ರೂ.ಗೆ ವೃದ್ಧಿಸಿದ್ದು, ಈ ಮೈಲುಗಲ್ಲು ದಾಟಿದ ಮೊದಲ ಭಾರತೀಯ ಕಂಪನಿಯಾಗಿದೆ.
ಫೋಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಅಮೆಜಾನ್ ಸ್ಥಾಪಕ ಜೆಫ್ ಬಿಜೋಸ್ ಅವರು ಮೊದಲ ಸ್ಥಾನದಲ್ಲಿದ್ದಾರೆ. (160 ಶತಕೋಟಿ ಡಾಲರ್), ಬಿಲ್ ಗೇಟ್ಸ್ 109 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮುಖೇಶ್ ಅಂಬಾನಿ ಭಾರತದ ರೀಟೇಲ್ ಉದ್ಯಮಿ ರಾಧಾಕೃಷ್ಣ ದಮನಿ ಅವರಿಗೆ 78ನೇ ಸ್ಥಾನ ಸಿಕ್ಕಿದೆ. ಇವರ ಆದಾಯ 13 ಬಿಲಿಯನ್ ಡಾಲರ್ ಆಗಿದೆ. ನಂತರ 103ನೇ ರ್ಯಾಂಕ್‍ನೊಂದಿಗೆ ಭಾರತದ ಐಟಿ ದಿಗ್ಗಜ ಶಿವ ನಾಡಾರ್ 9.7 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದಯ್ ಕೋಟಕ್ 129 ರ್ಯಾಂಕ್‍ನೊಂದಿಗೆ 10.4 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಗುಜರಾತ್‍ನಲ್ಲಿ ತಮ್ಮದೇ ಆದ ಬಂದರು ಹೊಂದಿರುವ ಗೌತಮ್ ಅದಾನಿ 8.9 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಪಟ್ಟಿಯಲ್ಲಿ 155 ರ್ಯಾಂಕ್ ಪಡೆದಿದ್ದಾರೆ. ಮೆಡಿಸಿನ್ ಕ್ಷೇತ್ರ ಉದ್ಯಮಿ ಸೈರಸ್ ಪೂನ್ವಾಲಾ 8.2 ಬಿಲಿಯನ್ ಡಾಲರ್‍ನೊಂದಿಗೆ ಶ್ರೀಮಂತ ಬಿಲಿಯನೇರ್ ಪಟ್ಟಿಯಲ್ಲಿ 165ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆದ ಬಳಿಕ ಈಗ ಒಂದಾಗಿ ಇರೋಣ ಎನ್ನಲು ನಾಚಿಕೆಯಾಗಲ್ವಾ : ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ
ಸಮಾಜದ ಆಗುಹೋಗುಗಳ ಬಗ್ಗೆ ಸದಾ ನಿರ್ಭೀತಿಯಿಂದ ದನಿ ಎತ್ತುತ್ತಾ, ಕಳೆದ ದಶಕದಿಂದ ಬಲಪಂಥೀಯ ವಿಚಾರಧಾರೆಗಳ ವಿರುದ್ಧ ಸಮರ ಸಾರಿರುವ ಬಹುಭಾಷಾ ನಟ ಕಿಶೋರ್, ಇದೀಗ ಮತ್ತೊಮ್ಮೆ ಕೇಂದ್ರ...








