ಬ್ರಿಟನ್ ನ ಐಕಾನಿಕ ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್ ಖರೀದಿಸಿದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ
ಏಷ್ಯಾದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್‌ಇಂಡಸ್ಟ್ರೀಸ್‌ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿಖ್ಯಾತ ಕಂಟ್ರಿ ಕ್ಲಬ್‌ನ ಐಷಾರಾಮಿ ಗಾಲ್ಫ್ ರೆಸಾರ್ಟ್‌ಹಾಗೂ ಸ್ಟೋಕ್‌ಪಾರ್ಕ್‌ಗಳನ್ನು ಖರೀದಿ ಮಾಡಿದ್ದಾರೆ. ಇದರ ಮೌಲ್ಯ ಭಾರತೀಯ ಲೆಕ್ಕಾಚಾರದಲ್ಲಿ 592 ಕೋಟಿ ರೂಪಾಯಿಗಳಾಗಿವೆ. ಬ್ರಿಟನ್‌ನ ಬಕಿಂಗ್‌ಶೈರ್‌ನಲ್ಲಿ ಇದು ಇದೆ. ಯುರೋಪ್‌ನಲ್ಲಿಯೇ ಅತ್ಯುನ್ನತ ಮಟ್ಟದ ಗಾಲ್ಫ್‌ಕ್ಲಬ್‌ಇದು ಎನಿಸಿಕೊಂಡಿದೆ.
ಈ ಸ್ವಾಧೀನವು ರಿಲಯನ್ಸ್‌ನ ಪ್ರಸ್ತುತ ಒಬೆರಾಯ್ ಹೋಟೆಲ್‌ಮತ್ತು ಮುಂಬೈನ ಹೋಟೆಲ್ಗಳಲ್ಲಿ ಕೂಡ ಪಾಲು ಹೊಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಿಲಯನ್ಸ್ 3.3 ಬಿಲಿಯನ್ ಡಾಲರ್ನ ಸ್ವಾಧೀನ ಘೋಷಿಸಿದೆ. ಚಿಲ್ಲರೆ ವ್ಯಾಪಾರದಲ್ಲಿ 14 ಪ್ರತಿಶತ, ತಂತ್ರಜ್ಞಾನ, ಮಾಧ್ಯಮ ಮತ್ತು ಟೆಲಿಕಾಂ ವಲಯದಲ್ಲಿ 80 ಪ್ರತಿಶತ ಮತ್ತು ಶೇ. 6ರಷ್ಟು ಎನರ್ಜಿಯಲ್ಲಿ ಹೂಡಿಕೆ ಮಾಡಿದೆ. ಇಂಗ್ಲೆಂಡ್ ಮೂಲದ ಬಕಿಂಗ್ಹ್ಯಾಂಮ್ಶೈರ್ನಲ್ಲಿ ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಹೊಂದಿರುವ ಯುಕೆ ಮೂಲದ ಸಂಸ್ಥೆಯು ರಿಲಯನ್ಸ್ನ ಗ್ರಾಹಕ ಮತ್ತು ಆತಿಥ್ಯ ಸ್ವತ್ತುಗಳನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.
2021ರ ಏಪ್ರಿಲ್ 22ರಂದು ಇಂಗ್ಲೆಂಡ್ನ ಸ್ಟೋಕ್ ಪಾರ್ಕ್ ಲಿಮಿಟೆಡ್ನ ಕಂಪನಿಯ ಒಟ್ಟು ಷೇರು ಬಂಡವಾಳವನ್ನು 57 ದಶಲಕ್ಷ ಪೌಂಡ್ಸ್ಗೆ ಸ್ವಾಧೀನಪಡಿಸಿಕೊಂಡಿದೆ. ಬ್ರಿಟನ್‌ನ ಚಿತ್ರರಂಗದ ಜತೆಗೂ ಈ ರೆಸಾರ್ಟ್‌ನಂಟು ಹೊಂದಿದ್ದು, ಜೇಮ್ಸ್‌ಬಾಂಡ್‌ಚಿತ್ರಗಳು ಇಲ್ಲೇ ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ.ಕಳೆದ ನಾಲ್ಕು 4 ವರ್ಷಗಳಲ್ಲಿ ರಿಯಲನ್ಸ್‌ಕಂಪೆನಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.14, ತಂತ್ರಜ್ಞಾನ ಕ್ಷೇತ್ರಕ್ಕೆ ಶೇ.80 ಹಾಗೂ ಇಂಧನ ಕ್ಷೇತ್ರದಲ್ಲಿ ಶೇ6ರಷ್ಟುಹಣವನ್ನು ರಿಯಲನ್ಸ್‌ಕಂಪೆನಿ ವೆಚ್ಚ ಮಾಡಿದ್ದು, ಇವುಗಳ ಸಂಪೂರ್ಣ ಖರ್ಚು 24,740 ಕೋಟಿ ರೂ ಎನ್ನಲಾಗಿದೆ.