ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮತ್ತೆ ಅಪಘಾತ – ಹಸು ಡಿಕ್ಕಿ…
ಗುಜರಾತ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತೆ ಅಪಘಾತಕ್ಕೀಡಾಗಿದೆ. ಏಕಾಏಕಿ ಹಸು ರೈಲಿನ ಮುಂಬಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ರೈಲಿನ ಮುಂಭಾಗ ಜಖಂಗೊಂಡಿದೆ. ವಲ್ಸಾದ್ ನ ಅತುಲ್ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಒಂದು ತಿಂಗಳಲ್ಲಿ ಇದು ಮೂರನೇ ಘಟನೆಯಾಗಿದೆ.
ರೈಲಿನ ವೇಗದಿಂದಾಗಿ ಒಂದು ಬೋಗಿ ಕೂಡ ಬೇರ್ಪಟ್ಟಿತು. ಸ್ವಲ್ಪ ಸಮಯದ ನಂತರ, ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಅದರ ಗಮ್ಯಸ್ಥಾನಕ್ಕೆ ಕಳುಹಿಸಲಾಯಿತು. ಇಂದು ಬೆಳಗ್ಗೆ 8.17ಕ್ಕೆ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ ರೈಲು ಅತುಲ್ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿತ್ತು. ಅಪಘಾತದ ನಂತರ ರೈಲು ಸುಮಾರು 26 ನಿಮಿಷಗಳ ಕಾಲ ನಿಲ್ದಾಣದಲ್ಲಿ ನಿಂತಿತ್ತು. 8.43ರ ಸುಮಾರಿಗೆ ಅದು ಗಮ್ಯಸ್ಥಾನಕ್ಕೆ ಹೊರಟಿತು.
ಡಿಕ್ಕಿಯಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಪ್ಲರ್ ಕವರ್ ಮತ್ತು ಬಿಸಿಯು ಕವರ್ ಕೂಡ ಹಾನಿಯಾಗಿದೆ. ರೈಲಿನ ನೀರು ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿದೆ., ಇದು ಈ ತಿಂಗಳ ಮೂರನೇ ಘಟನೆ. ಈ ಹಿಂದೆ ಈ ರೈಲು ಎರಡು ಬಾರಿ ಅಪಘಾತಕ್ಕೀಡಾಗಿತ್ತು.
Mumbai-Ahmedabad Vande Bharat Express damaged again, hits cattle on route








