ಮುಂಬೈ : ಡೆಲ್ಟಾ ಪ್ಲಸ್ ರೂಪಾಂತರ ತಳಿಗೆ ಮೊದಲ ಬಲಿ
ಸಂಪೂರ್ಣ ಲಸಿಕೆ ಪಡೆದಿದ್ದ 63 ವರ್ಷದ ವೃದ್ಧ ಮಹಿಳೆ ಡೆಲ್ಟಾ ಪ್ಲಸ್ ರೂಪಾಂತರ ತಳಿಯಿಂದಾಗಿ ಮೃತಪಟ್ಟಿದ್ದಾರೆ.. ಈ ಮೂಲಕ ಡೆಲ್ಟಾ ಪ್ಲಸ್ ರೂಪಾಂತರ ತಳಿಗೆ ಬಲಿಯಾದ ಮುಂಬೈನ ಮೊದಲ ಕೇಸ್ ಇದಾಗಿದೆ.. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಕರೋನವೈರಸ್ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ವೃದ್ಧೆ ತುತ್ತಾಗಿದ್ದರು. ಜುಲೈ 27 ರಂದು ಮಹಿಳೆ ಸಾವನ್ನಪ್ಪಿದ್ದರು.. ಆದ್ರೆ ವೈದ್ಯಕೀಯ ಪರೀಕ್ಷೆಯ ನಂತರ ಬುಧವರವಷ್ಟೇ ಡೆಲ್ಟಾ ಪ್ಲಸ್ ನಿಂದ ಮೃತಪಟ್ಟಿರುವುದಾಗಿ ಖಚಿತವಾಗಿದೆ. ಇನ್ನೂ ಮಹಾರಾಷ್ಟ್ರದ ರತ್ನಗಿರಿಯಲ್ಲಿ 80 ವರ್ಷದ ಮಹಿಳೆ ಡೆಲ್ಟಾ ಸೋಂಕಿಗೆ ಮೃತಪಟ್ಟಿದ್ದು ರಾಜ್ಯಕ್ಕೆ ಇದೇ ಮೊದಲ ಕೇಸ್ ಆಗಿತ್ತು.. ಇದೀಗ ಮಾಯಾನಗರಿ ಮುಂಬೈನಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.
ಬಿಜೆಪಿ ನಾಯಕನ ಮನೆ ಮೇಲೆ ಗ್ರೆನೇಡ್ ದಾಳಿ – 4 ವರ್ಷದ ಬಾಲಕ ಸಾವು
ಮೃತ ಮಹಿಳೆಯು ಶ್ವಾಸಕೋಶ ಸಂಬಂಧಿತ ಕಾಯಿಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆಕೆಗೆ ಮನೆಯಲ್ಲಿಯೇ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು. ಇನ್ನೂ ಅವರ ಸಂಪರ್ಕಕ್ಕೆ ಬಂದಿದ್ದವರು ಪತ್ತೆ ಹಚ್ಚಿ ಕ್ವಾರಂಟೈನ್ ಗೆ ಒಳಪಡಿಸುವ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ 6 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಅವರ ಮಾದರಿಗಳನ್ನು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ ಮತ್ತು ಎರಡು ಸಂಪರ್ಕಗಳನ್ನು ಡೆಲ್ಟಾ ಪ್ಲಸ್ ರೂಪಾಂತರದೊಂದಿಗೆ ಪತ್ತೆ ಮಾಡಲಾಗಿದೆ. ಇತರರ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂಬೈನಲ್ಲಿ ಡೆಲ್ಟಾ ಪ್ಲಸ್ ವೆರಿಯಂಟ್ ಸಾವಿನ ಮೊದಲ ಪ್ರಕರಣ ಇದಾಗಿದೆ ಎಂದು ಬಿಎಂಸಿಯ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿರುವ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ಡಾ. ಮಂಗಳಾ ಗೊಮರೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.