ಮಾಯಾನಗರಿಯಲ್ಲಿ ಭಾರೀ ಮಳೆ – ಗೋಡೆ ಕುಸಿದು 11 ಮಂದಿ ಸಾವು
ಮುಂಬೈ : ಇಡೀ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗ್ತಿದೆ.. ಆದ್ರೆ ಮಾಹಾರಷ್ಟ್ರ ಅದ್ರಲ್ಲೂ ಮುಂಬೈನಲ್ಲಿ ಮಳೆ ಉಗ್ರ ಸ್ವರೂಪ ಪಡೆದುಕೊಂಡಿದೆ.. ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಗೊಂಡಿದೆ.. ಈ ನಡುವೆ ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರದ ಚೆಂಬೂರಿನ ಭಾರತ್ ನಗರ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕಾಂಪೌಂಡ್ ಗೋಡೆ ಕುಸಿದಿದೆ. ಗೋಡೆ ಪಕ್ಕದಲ್ಲಿದ್ದ ಗುಡಿಸಲುಗಳ ಮೇಲೆ ಬಿದಿದ್ದು, ಈ ವೇಳೆ ಅಲ್ಲಿದ್ದ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ 2 NDRF ತಂಡ ದೌಡಾಯಿಸಿದ್ದು, ಅಗ್ನಿ ಶಾಮಕ ದಳದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಭಾರಿ ಮಳೆಯಿಂದಾಗಿ ಮುಂಬೈ ನದಗರದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ರಸ್ತೆಗಳಲ್ಲೆಲ್ಲಾ ಜಲಾವೃತಗೊಂಡಿದ್ದು, ಕೆರೆಯಂತಾಗಿವೆ.. ಹಲವು ವಾಹನಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈಲು ಸೇವೆಯಲ್ಲೂ ಅಡಚಣೆ ಉಂಟಾಗಿದೆ.. ಅನೇಕ ರೈಲು ಸೇವೆಗಳನ್ನ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ..
ಬಾಲಕನ ರಕ್ಷಣೆಗೆ ಹೋದ 30 ಜನ ಬಾವಿಗೆ ಬಿದ್ದ ಪ್ರಕರಣ – ಸಾವಿನ ಸಂಖ್ಯೆ 11ಕ್ಕೆ ಏರಿಕೆ