Mumbai Indians : ಮುಂಬೈ ಫ್ಯಾನ್ಸ್ ಗೆ ಸಿಹಿ ಸುದ್ದಿ ತಂದ ಜೋಫ್ರಾ ಆರ್ಚರ್
ದಕ್ಷಿಣ ಆಫ್ರಿಕಾ (South Africa) ಮತ್ತು ಇಂಗ್ಲೆಂಡ್ (England) ನಡುವಿನ 3-ಪಂದ್ಯಗಳ ODI ಸರಣಿಯನ್ನು ಹರಿಣಗಳು ವಶಕ್ಕೆ ಪಡೆದಿದ್ದಾರೆ. ಸರಣಿಯ ಮೂರನೇ ಪಂದ್ಯದಲ್ಲಿ, ಜೋಫ್ರಾ ಆರ್ಚರ್ (Jofra Archer) ಅವರು ಆರು ವಿಕೆಟ್ ಗಳಿಕೆಯೊಂದಿಗೆ ವಿಶ್ವ ಕ್ರಿಕೆಟ್‌ಗೆ ಮರಳುವ ಸೂಚನೆ ನೀಡಿದರು. ಇವರ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೋಡಿ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಕೊಂಚ ರಿಲೀಫ್ ಸಿಕ್ಕಿರುತ್ತದೆ.
ಈ ಸರಣಿಯ ಮೊದಲ 2 ಪಂದ್ಯಗಳ ಸೋಲಿನ ಬಳಿಕ ಇಂಗ್ಲೆಂಡ್ (England) ತಂಡಕ್ಕೆ ಕ್ಲೀನ್ ಸ್ವೀಪ್ ಅಪಾಯ ಎದುರಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ (England) ನಾಯಕ ಜೋಸ್ ಬಟ್ಲರ್ ಮತ್ತು ಡೇವಿಡ್ ಮಲಾನ್ ಅವರ ಶತಕಗಳ ಇನ್ನಿಂಗ್ಸ್‌ನಿಂದ 346 ರನ್ ಗಳಿಸಿತು. ಇದಾದ ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ (South Africa) ತಂಡ ಜೋಫ್ರಾ ಆರ್ಚರ್ (Jofra Archer) ಅವರ ಅದ್ಭುತ ಬೌಲಿಂಗ್ ಗೆ ಉತ್ತರ ನೀಡಲು ವಿಫಲವಾಯಿತು.
ಸರಣಿಯ ಮೊದಲ ODIನಲ್ಲಿ 1 ವಿಕೆಟ್ ಪಡೆದ ನಂತರ ಜೋಫ್ರಾ ಆರ್ಚರ್ (Jofra Archer) ಅವರನ್ನು ಎರಡನೇ ODI ನ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲಿಲ್ಲ. ಇದರ ನಂತರ, ಮೂರನೇ ಪಂದ್ಯದಲ್ಲಿ ತಂಡ ಸೇರಿ, ಜೋಫ್ರಾ ತನ್ನ ಹಳೆಯ ಬೌಲಿಂಗ್ ಮೊನಚನ್ನು ತೋರಿಸಿದರು. ಈ ಪಂದ್ಯದಲ್ಲಿ ಜೋಫ್ರಾ 9.1 ಓವರ್‌ಗಳಲ್ಲಿ ತಮ್ಮ ಬೌಲಿಂಗ್‌ನಲ್ಲಿ ಒಟ್ಟು 6 ವಿಕೆಟ್ ಪಡೆದರು.
6 ವಿಕೆಟ್ ಕಬಳಿಸಿದ ನಂತರ ಜೋಫ್ರಾ ಆರ್ಚರ್ (Jofra Archer), ಸುದೀರ್ಘ ಸಮಯದ ನಂತರ ಮರಳುವುದು ಸುಲಭವಲ್ಲ. ಆಟವಾಡಲು ಪ್ರಾರಂಭಿಸಿದ ಕ್ಷಣದಿಂದ, ನೀವು ನಿರಂತರವಾಗಿ ಸುಧಾರಿಸುತ್ತಿರುವಿರಿ ಎಂದು ನೀವು ಕಂಡುಕೊಳ್ಳುತ್ತೀರಿ” ಎಂದು ತಿಳಿಸಿದ್ದಾರೆ.
IPL ನ ಕೊನೆಯ ಋತುವಿನಲ್ಲಿ, ಜೋಫ್ರಾ ಆರ್ಚರ್ (Jofra Archer) ಗಾಯದ ಕಾರಣದಿಂದಾಗಿ ಆಡಲು ಸಾಧ್ಯವಾಗಲಿಲ್ಲ ಮತ್ತು ಅದರ ನಂತರ IPL 2023 ರ ಋತುವಿನ ಆರಂಭದ ಮೊದಲು ಮುಂಬೈ ಇಂಡಿಯನ್ಸ್ (Mumbai Indians) ಅವರ ಫಿಟ್ನೆಸ್ ಬಗ್ಗೆ ತಲೆ ಕೆಡಿಸಿಕೊಂಡಿತ್ತು. ಆದರೆ, ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಜೋಫ್ರಾ ತಮ್ಮ ಅದ್ಭುತ ಬೌಲಿಂಗ್‌ನಿಂದ ಫಿಟ್‌ನೆಸ್ ಸಾಬೀತುಪಡಿಸುವ ಜೊತೆಗೆ ಮುಂಬೈ ಇಂಡಿಯನ್ಸ್‌ಗೆ ರಿಲೀಫ್ ಸುದ್ದಿ ನೀಡಿದ್ದಾರೆ.
Mumbai Indians: Jofra Archer brought sweet news to Mumbai fans