ರೈಲು ದ್ವಾರಕ್ಕೆ ಹಣೆ ಹಚ್ಚಿ ನಮಸ್ಕರಿಸಿದ ಪ್ರಯಾಣಿಕ : ಫೋಟೊ ವೈರಲ್
ಮುಂಬೈ : ಕೊರೊನಾ ಕಂಟಕದಿಂದ ಸ್ಥಗಿತಗೊಂಡಿದ್ದ ಮುಂಬೈ ಸ್ಥಳೀಯ ರೈಲ್ವೆ ಪ್ರಾರಂಭವಾಗಿದೆ.
ಈ ಮಧ್ಯೆ ಮತ್ತೆ ರೈಲ್ವೆ ಆರಂಭಗೊಂಡಿರುವುದರಿಂದ ಪ್ರಯಾಣಿಕನೊಬ್ಬ ರೈಲ್ವೆ ದ್ವಾರಕ್ಕೆ ಹಣೆ ಹಚ್ಚಿ ನಮಸ್ಕರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಮುಂಬೈ ಲೋಕಲ್ ಟ್ರೈನ್ ಅಂದ್ರೆ ಇಲ್ಲಿನ ನಿವಾಸಿಗಳ ಜೀವನಾಡಿ ಇದ್ದಂತೆ. 80 ಕಿ.ಮೀ. ಉದ್ದಕ್ಕೂ ಹಬ್ಬಿರುವ ಈ ರೈಲು ಜಾಲದಲ್ಲಿ ದಿನಂಪ್ರತಿ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ.
ಕೇವಲ ಈ ರೈಲುಗಳಲ್ಲಿ ಪಾವ್ ಬಾಜಿ ಮಾರಿಕೊಂಡೇ ಎಷ್ಟೋ ಮಂದಿ ತಮ್ಮ ಬದುಕು ಸಾಗಿಸುತ್ತಿದ್ದಾರೆ.
ಆದ್ರೆ ಯಾವಾಗ ದೇಶಕ್ಕೆ ಕೊರೊನಾ ವಕ್ಕರಿಸಿತೋ ಅಂದಿನಿಂದ ಈ ರೈಲು ಸಂಚಾರವನ್ನ ಸ್ಥಗಿತಗೊಳಿಸಲಾಗಿತ್ತು. ಲೋಕಲ್ ರೈಲುಗಳ ಸಂಚಾರ ಇಲ್ಲದೇ ಮುಂಬೈ ಉಸಿರಾಡುವುದನ್ನೇ ನಿಲ್ಲಿಸಿಬಿಟ್ಟಿದಿಯೇನೋ ಎಂಬಂತೆ ಭಾಸವಾಗುತ್ತಿತ್ತು.
ಇದೀಗ ದೇಶದಲ್ಲಿ ಕೊರೊನಾ ಕಾಟ ತಗ್ಗಿದ್ದು, ಮತ್ತೆ ಮುಂಬೈ ಲೋಕಲ್ ಟ್ರೈನ್ ಗಳು ಎಂದಿನಂತೆ ಸಂಚರಿಸುತ್ತಿದ್ದು, ಪ್ರಯಾಣಿಕನೊಬ್ಬ ರೈಲ್ವೆ ದ್ವಾರಕ್ಕೆ ಹಣೆ ಹಚ್ಚಿ ನಮಸ್ಕರಿಸಿದ್ದಾನೆ.
ಈ ಫೋಟೋ ಒಂದೇ ಸಾಕು ಇಲ್ಲಿನ ಈ ಲೋಕಲ್ ಟ್ರೈನ್ ಮಹತ್ವ ಎಷ್ಟಿದೆ ಎಂದು ತಿಳಿಯೋದಕ್ಕೆ.
ಇನ್ನು ಈ ಫೋಟೋವನ್ನು ಹಂಚಿಕೊಂಡಿರುವ ಗಾಡ್ ಮ್ಯಾನ್ ಚಿಕನಾ ಎಂಬೋರು, ನನ್ನ ಹೃದಯವನ್ನು ಮುಟ್ಟಿದ ಒಂದು ಕ್ಲಿಕ್.
11 ತಿಂಗಳ ನಂತರ ಹತ್ತುವ ಮುನ್ನ ಮುಂಬೈ ಲೋಕಲ್ ಅನ್ನು ಪೂಜಿಸುವ ಪ್ರಯಾಣಿಕ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ರೀ ಟ್ವೀಟ್ ಮಾಡಿರುವ ಉದ್ಯಮಿ ಆನಂದ ಮಹೀಂದ್ರಾ, ಭಾರತದ ಆತ್ಮ… ನಾವು ಅದನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









