ಯುವತಿಯ ಬರ್ತ್ ಡೇ ಗಾಗಿ ಕೇಕ್ ಕಳುಹಿಸಿಕೊಟ್ಟ ಮುಂಬೈ ಪೊಲೀಸರು..!
ಮುಂಬೈ : ಮುಂಬೈ ಪೊಲೀಸರು ಕೊರೊನಾ ಜಾಗೃತಿ , ಮಾಸ್ಕ್ ಜಾಗೃತಿ , ಲಾಕ್ ಡೌನ್ ಸಂಬಂಧ ತಮ್ಮ ವಿನೂತನ ಕಾರ್ಯ ವೈಖರಿಯಿಂದಲೇ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿಯೇ ಇರುತ್ತಾರೆ. ಇವರ ವಿನೂತನ ಕಾರ್ಯಕ್ಕೆ ಎಷ್ಟೋ ಜನ ಫಿದಾ ಆಗಿದ್ದಾರೆ. ಇದೀಗ ಮುಂಬೈ ಪೊಲೀಸರು ಕೊರೊನಾ ಹಾವಳಿ ಕರ್ಫ್ಯೂ ನಡುವೆ ಬರ್ತ್ ಡೇ ಸಂಭ್ರಮವಿಲ. ಆದ್ರೂ ಸುರಕ್ಷತೆಯೇ ಮುಖ್ಯ ಎಂಬ ಸಂದೇಶ ರವಾನಿಸಿದ್ದ ಯುವತಿ ಮನೆಗೆ ಕೇಕ್ ಕಳುಹಿಸಿಕೊಟ್ಟಿದ್ದಾರೆ. ಕೇಕ್ ಮೇಲೆ ರೆಸ್ಪಾನ್ಸಿಬಲ್ ಸಿಟಿಜನ್ ಎಂದು ಬರೆದು ಗಮನ ಸೆಲೆದಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ.
ಏಪ್ರಿಲ್ 22 ರಂದು ಮುಂಬೈ ನಿವಾಸಿ ಸಮಿತಾ ಪಾಟೀಲ್ ಅವರದು ಹುಟ್ಟುಹಬ್ಬವಿತ್ತು. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಹಾಗೂ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ತನ್ನ ಜನ್ಮದಿನದ ಸಂಭ್ರಮಕ್ಕೆ ಸಮಿತಾ ಬ್ರೇಕ್ ಹಾಕಿದ್ದಾರೆ. ಪಾರ್ಟಿ ಕೇಳಿದ ಸ್ನೇಹಿತರಿಗೆಲ್ಲ ಬುದ್ಧವಾದ ಹೇಳಿದ್ದಾರೆ. ಕೋವಿಡ್ ಸೋಂಕು ರಣಕೇಕೆ ಹಾಕುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಒಳ್ಳೆಯದಲ್ಲ. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಆಕೆ ಪಾರ್ಟಿ ಕೇಳಿದ ಸ್ನೇಹಿತರಿಗೆಲ್ಲ ಸಲಹೆ ನೀಡಿದ್ದಾರೆ.
ಕೋವಿಡ್ ಸಮಯದಲ್ಲಿ ಸಮಿತಾ ತೋರಿದ ಸಾಮಾಜಿಕ ಜವಾಬ್ದಾರಿಯ ವಾಟ್ಸಾಪ್ ಚಾಟ್ನಣ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಇವು ಮುಂಬೈ ಪೊಲೀಸರ ಗಮನಕ್ಕೂ ಬಂದಿವೆ. ಸಮಿತಾ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೊಲೀಸರು, ಆಕೆಯ ಮನೆಗೆ ಕೇಕ್ ಪಾರ್ಸೆಲ್ ಕಳುಹಿಸಿಕೊಟ್ಟಿದ್ದಾರೆ. ಹಾಗೂ ಅದರ ಮೇಲೆ ‘ಜವಾಬ್ದಾರಿಯುತ ನಾಗರಿಕ’ ಎಂದು ಬರೆಯಲಾಗಿದೆ.