ವಿಜಯ್ ಹಜಾರೆ ಟ್ರೋಫಿ ಫೈನಲ್ – ರನ್ ಮೇಷಿನ್ ಪೃಥ್ವಿ ಶಾಗೆ ಗಂಭೀರ ಗಾಯ…?
Prithvi Shaw horror injury -Vijay Hazare Trophy
2021ರ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದ ವೇಳೆ ಮುಂಬೈ ನಾಯಕ ಪೃಥ್ವಿ ಶಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಶಾ ಗಾಯಗೊಂಡಿದ್ದು, ಫೀಲ್ಡ್ ನಿಂದಲೇ ಹೊರನಡೆದಿದ್ದಾರೆ.
Prithvi Shaw horror injury -Vijay Hazare Trophy
ಪಂದ್ಯ 24ನೇ ಓವರ್‍ನ ಪ್ರಶಾಂತ್ ಸೋಲೆಂಕಿ ಅವರ ಎಸೆತವನ್ನು ಉತ್ತರ ಪ್ರದೇಶದ ಮಾಧವ್ ಕೌಶಿಕ್ ಅವರು ಬಲವಾಗಿ ಹೊಡೆದಿದ್ದರು. ಚೆಂಡು ಪೃಥ್ವಿ ಶಾ ಅವರ ಎಡ ಮೊಣಕಾಲಿನ ಮುಂಭಾಕ್ಕೆ ತಾಗಿದೆ. ಆಗ ನೋವನ್ನು ಸಹಿಸಿಕೊಳ್ಳಲಾಗದೇ ಪೃಥ್ವಿ ಶಾ ಅವರು ಮೈದಾನದಲ್ಲಿ ಹೊರಳಾಡಿದ್ದಾರೆ. ಆ ನಂತರ ಅವರು ಹೆಚ್ಚಿನ ಚಿಕಿತ್ಸೆಗಾಗಿ ಪೆವಿಲಿಯನ್‍ಗೆ ಹಿಂತಿರುಗಿದ್ದಾರೆ.
ಪೃಥ್ವಿ ಶಾ ಅವರು ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಒಂದು ದ್ವಿಶತಕ ಹಾಗೂ ಮೂರು ಶತಕಗಳನ್ನು ಸಿಡಿಸಿ ದಾಖಲೆಯ ರನ್ ಕೂಡ ಗಳಿಸಿದ್ದರು. ಮುಂಬೈ ತಂಡದ ಗೆಲುವಿನ ರೂವಾರಿಯಾಗಿರುವ ಶಾ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡ್ತಾರೋ ಇಲ್ವವೋ ಅನ್ನೋದು ಇನ್ನೂ ಕೂಡ ತಿಳಿದು ಬಂದಿಲ್ಲ.
#PrithviShaw injury #Mumbai captain Prithvi Shaw #Vijay Hazare Trophy #cricket #saakshatv