ಸೋಂಕಿತರು ಆಸ್ಪತ್ರೆ ಮುಂದೆ ಸಾಲು ಗಟ್ಟಿ ನಿಂತಿದ್ರೆ ನಾವು ನೆಮ್ಮದಿಯ ನಿದ್ದೆ ಮಾಡಲಿಕ್ಕೆ ಆಗಲ್ಲಾ – ಸೋನು ಸೂದ್..!
ಬಾಲಿವುಡ್ ನಟ ಬಡವರ ಪಾಲಿನ ರಿಯಲ್ ಹೀರೋಫ ಸೋನು ಸೂದ್ ಅವರು ಕಳೆದ ವರ್ಷ ಲಾಕ್ ಡೌನ್ ವೇಳೆಯಿಂದಲೂ ಸಹ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು , ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಾ ರೀಲ್ ನಲ್ಲಿ ವಿಲ್ಲನ್ ಆದ್ರೂ ರಿಯಲ್ ಲೈಫ್ ನ ಹೀರೋ ಆಗಿದ್ದಾರೆ.
ಇದೀಗ ಕೊರೊನಾ 2ನೇ ಅಲೆ ವೇಳೆಯೂ ಸೋನು ಸೂದ್ ತಮ್ಮ ಸಮಾಜಮುಖಿ ಕಾರ್ಯಗಳನ್ನ ನಿಲ್ಲಿಸಿಲ್ಲ. ಆಕ್ಸಿಜನ್ ಕೊರತೆ , ಬೆಡ್ ಕೊರತೆ ಎದುರಿಸುತ್ತಿರುವ ಇಂತಹ ಸಮಯದಲ್ಲಿ , ಗೆಳೆಯರ ಜೊತೆ ಸೇರಿ ಆಕ್ಸಿಜನ್ ಪೂರೈಸುವ ಕಾರ್ಯವನ್ನು ಸೋನು ಸೂದ್ ಮಾಡುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೋನು, ‘ಮಧ್ಯ ರಾತ್ರಿ ಹಲವಾರು ಕರೆಗಳನ್ನು ಮಾಡಿ ಅಗತ್ಯವಿರುವ ರೋಗಿಗಳಿಗೆ ಬೆಡ್ ಕೊಡಿಸವುದು, ಅಗತ್ಯವಿರರುವವರಿಗೆ ಆಮ್ಲಜಕನ ಕೊಡಿಸುವುದರಲ್ಲಿ ಇರುವ ನೆಮ್ಮದಿ 100 ಕೋಟಿ ಬಜೆಟ್‌ನ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಇಲ್ಲ. ರೋಗಿಗಳು ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಂತಿರುವಾಗ ನಾವು ಮಲಗಿ ನಿದ್ರಿಸಲು ಸಾಧ್ಯವಿಲ್ಲ’ ಎಂದಿದ್ದು ಮತ್ತೊಮ್ಮೆ ನೆಟ್ಟಿಗರ ಮನಗೆದ್ದಿದ್ದಾರೆ.