30 ವರ್ಷಗಳಲ್ಲಿ ಕಂಡು ಕೇಳರಿಯದ ಭಾರಿ ಗಾಳಿ ಮಳೆಗೆ ಸಾಕ್ಷಿಯಾದ ಮುಂಬೈ
ಮುಂಬೈ, ಅಗಸ್ಟ್ 7: ಮುಂಬೈನಲ್ಲಿ ಈ ಋತುವಿನ ಅತಿ ಹೆಚ್ಚು ಮಳೆಯಾಗಿದ್ದು ಬುಧವಾರ ಕೇವಲ 12 ಗಂಟೆಗಳಲ್ಲಿ ಗಾಳಿಯೊಂದಿಗೆ ಅತಿಹೆಚ್ಚು ಮಳೆಯಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಮುಂಬೈನಲ್ಲಿ 215.8 ಮಿ.ಮೀ ಮಳೆಯಾಗಿದ್ದು, ಪೂರ್ವ ಉಪನಗರಗಳಲ್ಲಿ 101.9 ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ 76.03 ಮಿ.ಮೀ ಮಳೆಯಾಗಿದೆ.

ಏತನ್ಮಧ್ಯೆ, ಸಂಜೆ ಹೆಚ್ಚಿನ ವೇಗದ ಗಾಳಿಯಿಂದಾಗಿ ಮರಗಳು ಬಿದ್ದಿರುವ ಕಾರಣ ದಕ್ಷಿಣ ಮುಂಬೈನ ಮಹಾಪಾಲಿಕಾ ಮಾರ್ಗ ಮತ್ತು ಕೊಲಾಬಾ ಕಾಸ್ವೇ ರಸ್ತೆಯಂತಹ ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಸಂಚಾರ ಸ್ಥಗಿತಗೊಳಿಸಲಾಗಿದೆ
ಮೂಲಗಳ ಪ್ರಕಾರ, ದಕ್ಷಿಣ ಮುಂಬಯಿಯಲ್ಲಿ ಹಲವಾರು ರಸ್ತೆಗಳು ಮತ್ತು ಪ್ರದೇಶಗಳು ಹಿಂದೆಂದೂ ಈ ರೀತಿಯ ಪ್ರವಾಹವನ್ನು ಕಂಡಿಲ್ಲ, ಪ್ರವಾಹಕ್ಕೆ ಸಿಲುಕಿ ಬಸ್ಸುಗಳು ಸೇರಿದಂತೆ ಹಲವಾರು ವಾಹನಗಳು ರಸ್ತೆಗಳಲ್ಲಿ ಸಿಲುಕಿಕೊಂಡಿವೆ.
ಪೆಡ್ಡರ್ ರಸ್ತೆಯ ಹ್ಯಾಂಗಿಂಗ್ ಗಾರ್ಡನ್ಸ್ ಕನಿಷ್ಠ 50 ಮರಗಳು ಉರುಳಿ ಬಿದ್ದಿವೆ. ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರು ಗುರುವಾರ (ಆಗಸ್ಟ್ 6, 2020) ಬೆಳಿಗ್ಗೆ ಕೆಲಸ ಪರಿಶೀಲಿಸಲು ಸ್ಥಳಕ್ಕೆ ಆಗಮಿಸಿದ್ದರು.

ಕಳೆದ 30 ವರ್ಷಗಳಲ್ಲಿ ನಾನು ಇಂತಹ ಮಳೆಯನ್ನು ನೋಡಿಲ್ಲ. ಮುಂಬೈ ಅಥವಾ ವಿಶ್ವದ ಯಾವುದೇ ನಗರವು ಇಂತಹ ಭಾರಿ ಮಳೆಯಿಂದ ಹಾನಿಗೊಳಗಾಗುತ್ತದೆ. ಮುಂಬೈನಲ್ಲಿ ನಿನ್ನೆ 101 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು ದಕ್ಷಿಣ ಮುಂಬೈ ಪ್ರದೇಶದ ಮೇಲೆ ಪರಿಣಾಮ ಬೀರಿತು. ಜುಲೈ 26 ರ ಪ್ರವಾಹ ಸಂಭವಿಸಿದಾಗ ನಾನು ಮುಂಬೈನಲ್ಲಿದ್ದೆ. ಆದರೆ ಆಗಲೂ ನಾನು ಇಂತಹ ಮಳೆಯನ್ನು ನೋಡಿರಲಿಲ್ಲ.
Due to heavy rains, the retaining wall of NS Patkar Road at @mybmcWardD collapsed post 11:30 pm yesterday (August 5, 2020). The work of removing its debris along with the fallen trees is being conducted on war footing.#MyBMCUpdates#MyBMCMonsoonUpdates pic.twitter.com/bLHL4EVY8Q
— माझी Mumbai, आपली BMC (@mybmc) August 6, 2020
ಮುಂಬೈ ನಗರ ಮತ್ತು ಉಪನಗರಗಳಲ್ಲಿ ಮುಂದಿನ 3- 4 ಗಂಟೆ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು / ಮಿಂಚಿನ ಸಾಧ್ಯತೆ ಇದೆ ಎಂದು ಐಎಂಡಿ ಟ್ವೀಟ್ ಮಾಡಿದೆ.








