ಮಂಗಳೂರು ; ಇಂದು ಮುಂಜಾನೆ 3.30ಕ್ಕೆ ಮುಂಬೈನಿಂದ ಮಂಗಳೂರಿಗೆ 30 ಜನ ಆಗಮಿಸಿದ್ದಾರೆ. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಕ್ಕೆ ಆಗಮಿಸಿದ 30 ಜನರ ಮಾಹಿತಿಯಯನ್ನು ಅಧಿಕಾರ ಪಡೆದರು. ದೆಹಲಿ-ಮುಂಬೈ-ಕೇರಳ ಸಂಪರ್ಕದ ರೈಲು ಮುಂಜಾನೆ 3.30 ಗಂಟೆಗೆ ಆಗಮಿಸಿದೆ. ಪೊಲೀಸರ ಸೂಚನೆಯಂತೆ ಆಟೋ,ಬಸ್ ನಲ್ಲಿ ಮನೆಗೆ ಹೋಗಿದ್ದಾರೆ. ಈ ವೇಳೆ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್ ನಲ್ಲಿ ಇರುವಂತೆ ಬಂದ ಜನಕ್ಕೆ ಪೊಲೀಸರು ತಿಳಿಸಿದ್ದಾರೆ. ಆಗ ಬಂದವರು ನಾವು ಕ್ವಾರೆಂಟೈನ್ ನಲ್ಲಿ ಇರುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಧಿಕಾರಗಳು ಬರುವುದು ತಡವಾಗಿದ್ದರಿಂದ ಮೂರು ಜನ ಸ್ವತಃ ತಾವೇ ಸುರತ್ಕಲ್ ನಾಡ ಕಚೇರಿಗೆ ತೆರಳಿ ಮುಂಬೈನಿಂದ ಬಂದ ವಿಚಾರ ತಿಳಿಸಿದ್ದಾರೆ. ಅಧಿಕಾರಿಗಳು ಬಂದ ಬಳಿಕ ಪ್ರತಿಯೊಬ್ಬರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದಾದ ಬಳಿಕವೇ ಮುಂಬೈನಿಂದ ಬಂದ ಜನರನ್ನು ತಮ್ಮ ಮನೆಗೆ ಕಳಿಸಲಾಗಿದೆ.
ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ: ಇರಾನ್ ಮಹತ್ವದ ಘೋಷಣೆ
ನೆರೆಯ ರಾಷ್ಟ್ರಗಳಿಂದ ನೇರವಾಗಿ ದಾಳಿ ನಡೆಯದ ಹೊರತು, ಆ ದೇಶಗಳನ್ನು ಗುರಿಯಾಗಿಸಿ ಯಾವುದೇ ಸೈನಿಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್ ಮಹತ್ವದ ಘೋಷಣೆ...








