‘ಮುಂಗಾರು ಮಳೆ’ ಅಲ್ಲ ‘ಚುಮ್ಮ’ ಎಂದ ಗಣೇಶ್..!

1 min read

‘ಮುಂಗಾರು ಮಳೆ’ ಅಲ್ಲ ‘ಚುಮ್ಮ’ ಎಂದ ಗಣೇಶ್..!

ಗೋಲ್ಡನ್ ಸ್ಟಾರ್ ಗಣೇಶ್ ಗೆ ಬ್ರೇದು ತಂದು ಕೊಟ್ಟ , ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ ಸಿನಿಮಾ ಮುಂಗಾರುಮಳೆ…. ಈ ಸಿನಿಮಾ ಇಂಡಸ್ಟ್ರಿಯಲ್ ಹಿಟ್ ಸಿನಿಮಾ… ಕಾಮಿಡಿ ಜೊತೆಗೆ ಲವ್ ಸ್ಟೋರಿ , ಸೆಂಟಿಮೆಂಟ್ , ಸೀನ್ಸ್ , ಡೈಲಾಗ್ಸ್ , ಹಾಡುಗಳ ಜೊತೆಗೆ ಈ ಸಿನಿಮಾ ಆಗ ಒಂದು ದೊಡ್ಡ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು..

ಈ ಸಿನಿಮಾ ರಿಲೀಸ್ ಆಗಿ ಸುಮಾರು ಎರೆಡೂವರೆ ವರ್ಷ ಯಶಸ್ವಿಯಾಗಿ ಓಡಿತ್ತು..  ಮುಂಗಾರು ಮಳೆ ಸಿನಿಮಾ ದಾಖಲೆಯನ್ನ ಈ ವರೆಗೂ ಯಾವ ಸಿನಿಮಾಗಳಿಂದ ಮುರಿಯಲು ಸಾಧ್ಯವಾಗಿಲ್ಲ.. ಈ ಸಿನಿಮಾ ರಿಲೀಸ್ ಬರೋಬ್ಬರಿ 15 ವರ್ಷಗಳೇ  ಕಳೆದುಹೋಗಿದೆ..

2 ಕೋಟಿ ರೂಪಾಯಿ ಬಜೆಟ್ ನ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 75 ಕೋಟಿ ರೂಪಾಯಿ. 865 ದಿನಗಳ ಕಾಲ ಸಿನಿಮಾ ಮಂದಿರಗಳಲ್ಲಿ ಸಕ್ಸಸ್ ಫುಲ್ ಆಗಿ ಓಡಿ ರೆಕಾರ್ಡ್ ಮಾಡಿದ ಸಿನಿಮಾ ಇದು..

ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಅಷ್ಟೇ ಅಲ್ದೇ ಮಲ್ಟಿಪ್ಲಿಕ್ಸ್ ಗಳಲ್ಲಿ  ಒಂದು ವರ್ಷ ಸತತವಾಗಿ ತೆರೆಕಂಡಿದ್ದ ಸಿನಿಮಾ ಮುಂಗಾರುಮಳೆ..

ಆದ್ರೆ ಇತ್ತೀಚೆಗಷ್ಟೇ ಈ ಸಿನಿಮಾದ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಹೊರಬಿದ್ದಿದೆ… ಹೌದು ಗಣೇಶ್  ಮುಂಗಾರು ಮಳೆ ಸಿನಿಮಾದ ಕೆಲವು ಸತ್ಯಗಳನ್ನ ರಿವೀಲ್ ಮಾಡಿದ್ದು , ಆಶ್ಚರ್ಯ ಮೂಡಿಸಿದ್ದಾರೆ..

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಸ್ನೇಹಿತರಿಗಾಗಿ , ಸ್ನೇಹಿತರಿಂದ , ಸ್ನೇಹಿತರಿಗೋಸ್ಕರ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ‘ಮುಂಗಾರು ಮಳೆ ‘ ಚಿತ್ರತಂಡ ಬಂದಿದ್ದು, ಇದೇ ಸಂದರ್ಭದಲ್ಲಿ ಗಣೇಶ್ ಕೆಲ ವಿಚಾರಗಳನ್ನ ಶೇರ್ ಮಾಡಿಕೊಂಡಿದ್ದಾರೆ..

ಅಂದ್ಹಾಗೆ ಸಿನಿಮಾಗೆ ಮೊದಲು ಮುಂಗಾರು ಮಳೆ ಎಂದು ಹೆಸರಿಟ್ಟಿರಲಿಲ್ಲವಂತೆ.. ಬದಲಾಗಿ ‘ಚುಮ್ಮ’ ಎಂಬ ಟೈಟಲ್ ನ ಇಡಲಾಗಿತ್ತಂತೆ..

ಅಲ್ಲದೇ ಅನಿಸುತಿದೆ ಯಾಕೋ ಇಂದು ಹಾಡಿನ ಶೂಟಿಂಗ್ ವೇಳೆ  ನೀರಿನಲ್ಲಿ ಮೊಸಳೆ ಇದ್ದ ವಿಚಾರವನ್ನೂ ಗಣೇಶ್ ಗೆ ಯಾರೂ ಕೂಡ ತಿಳಿಸಿರಲಿಲ್ಲ ಎನ್ನುವ ಭಯಾನಕ ಸತ್ಯವನ್ನೂ ಶೇರ್ ಮಾಡಿಕೊಂಡಿದ್ದಾರೆ..  ಹೀಗೆ ಇನ್ನೂ ಹಲವಾರು ವಿಚಾರಗಳನ್ನ ತಿಳಿಸಿದ್ದಾರೆ..

ಈ ಸಿನಿಮಾಗೆ ವಿಕಟಕವಿ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದರು, ನಾಯಕಿಯಾಗಿ ಪೂಜಾ ಗಾಂಧಿ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದಿದ್ದರು..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd