ಬೆಂಗಳೂರು : ಏಳೇಳು ಜನ್ಮದಲ್ಲೂ ನಾನು ಡಿಕೆಶಿವಕುಮಾರ್ ಅವರಿಗೆ ಸರಿಸಾಟಿ ಆಗಲು ಸಾಧ್ಯವಿಲ್ಲ ಎಂದು ಆರ್ ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ನಿನ್ನೆ ಡಿ.ಕೆ.ಶಿವಕುಮಾರ್ ಯುದ್ಧದಲ್ಲಿ ಎದುರಾಳಿ ಸರಿಸಮ ಇದ್ರೆ ಹೊರಾಡಬಹುದೆಂದು ಮುನಿರತ್ನ ಕುರಿತು ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಡಿಕೆಶಿವಕುಮಾರ್ ಹೇಳಿದ ಮಾತು ಸತ್ಯ. ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ.
ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ, ಏಳೇಳು ಜನ್ಮದಲ್ಲೂ ಡಿಕೆಶಿಯವ್ರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ. ಡಿಕೆಶಿ ಎಂಥ ದೊಡ್ಡವರು, ಅವರ ಮುಂದೆ ನಾನು ಸಣ್ಣವನು.
ಇದನ್ನೂ ಓದಿ : ಸಿದ್ದರಾಮಯ್ಯ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ : ಹೆಚ್.ವಿಶ್ವನಾಥ್ ಗರಂ
ಅವರು ಇವತ್ತು ಯಾವ ಮಟ್ಟದಲ್ಲಿದ್ದಾರೆ, ನಾನು ಆ ಮಟ್ಟಕ್ಕೆ ತಲುಪಲು ಆಗಲ್ಲ. ದೇವರು ನನಗೆ ಏಳು ಜನ್ಮ ಕೊಟ್ರೂ ಅವರ ಸಮನಾಗಿ ಬರಲು ಸಾಧ್ಯವಿಲ್ಲ.
ಡಿಕೆಶಿಯವ್ರಿಗೂ ನನಗೂ ಹೋಲಿಕೆ ಮಾಡಿ ಮಾತಾಡೋದೇ ತಪ್ಪು ಎಂದು ಮುನಿರತ್ನ ವ್ಯಂಗ್ಯವಾಡಿದರು.
ಇದೇ ವೇಳೆ ಆರ್ ಆರ್ ನಗರಕ್ಕೆ ಪ್ಯಾರಾ ಮಿಲಿಟರಿ ಪಡೆ ನಿಯೋಜನೆಗೆ ಒತ್ತಾಯ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ಪ್ಯಾರಾ ಮಿಲಿಟರಿ ತುಕಡಿ ನಿಯೋಜನೆ ಕ್ಷೇತ್ರಕ್ಕೆ ಅಗತ್ಯ ಇದೆ.
ಪ್ಯಾರಾ ಮಿಲಿಟರಿ ಪಡೆ ಕರೆಸುವ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿದ್ದೇನೆ.
ಹೀಗಾಗಿ ಪ್ಯಾರಾ ಮಿಲಿಟರಿ ಪಡೆ ಕರೆಸುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಮುಂದಿನ ನಿರ್ಧಾರ ತಗೋತಾರೆ.
ಇದನ್ನೂ ಓದಿ : ಕೈ-ಕಮಲ `ಕಾಡುಮನುಷ್ಯ’ ಕಿತ್ತಾಟ; ಹುಲಿಯಾ ಏಟಿಗೆ ಬಿಜೆಪಿ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ..!
ಪ್ಯಾರಾ ಮಿಲಿಟರಿ ಪಡೆ ಬಂದ್ರೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯುತ್ತದೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವುದು ಮುಖ್ಯ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel