ಬೆಂಗಳೂರು: ನನ್ನ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಆರೋಪದ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್ನ (Congress) ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಕೈವಾಡ ಇದೆ ಎಂದು ಶಾಸಕ ಮುನಿರತ್ನ (Munirathna) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಸುಳ್ಳು ರೇಪ್ಕೇಸ್ ಹಾಕಲಾಗಿದೆ. ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರುತ್ತೇನೆ. ಕುಸುಮಾ ಅವರೂ ಬರಲಿ. ರೇಪ್ ಕೇಸ್ ಕೊಟ್ಟವರು ಅವರಿಗೆ ಪರಿಚಯವೇ ಇಲ್ಲ ಅಂತಾ ದೇವರ ಎದುರೇ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ನೀವು ವಿದ್ಯಾವಂತರು. ಹೀಗೆ ಕೆಳಮಟ್ಟದ ರಾಜಕಾರಣ ಮಾಡಬೇಡಿ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಾಯ ಮಾಡಿ, ಅಪಪ್ರಚಾರ ಮಾಡಬೇಡಿ ಎಂದು ಹೇಳಿದ್ದಾರೆ.