murder-ನಾಯಿಗೆ ಊಟ ಹಾಕಿಲ್ಲವೆಂದು ಸಂಭಂದಿ ಸಹೋದರನನ್ನು ಕೊಂದ ಘಟನೆ ಬೇಳಕಿಗೆ ಬಂದಿದೆ. ಕೇಳಲು ವಿಚಿತ್ರ ಎನ್ನಿಸಿದರು ನಿಜ ಈ ಘಟನೆಯು ಕೇರಳದ ಪಲಕ್ಕಾಡ್ನಲ್ಲಿ ನೆಡೆದಿದೆ.
27 ವರ್ಷದ ಯುವಕನೊಬ್ಬ ತನ್ನ ಪ್ರೀತಿಯ ನಾಯಿಗೆ ಊಟ ಹಾಕಿಲ್ಲವೆಂದು ತನ್ನ 21 ವರ್ಷದ ಸಹೋದರ ಸಂಭಂದಿಯನ್ನು ದಾರುಣವಾಗಿ ಹೋಡೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ .
ಪಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಅಕ್ಟೋಬರ್ 4ರಂದು ರಾತ್ರಿ ನಾಯಿಗೆ ಊಟ ನೀಡಿಲ್ಲ ಎಂಬ ಕಾರಣಕ್ಕೆ ಸಹೋದರ ಸಂಭಂದಿಯನ್ನು ಕೋಪಗೊಂಡ ಆರೋಪಿ ಹಕೀಂ ಎಂಬಾತ ನಾಯಿಯ ಬೆಲ್ಟ್ ಮತ್ತು ಮರದ ಕೋಲಿನಿಂದ 21 ವರ್ಷದ ಹರ್ಷದ್ ನನ್ನು ತಿವ್ರವಾಗಿ ತಳಿಸಿದ ಕಾರಣ ರಕ್ತದ ಮಡುವುನಲ್ಲಿ ಬಿದ್ದು ಒದ್ದಾಡುತ್ತಿದ್ದ.
ಅದನ್ನು ಕಂಡು ಭಯಗೊಂಡ ಹಕೀಂ ತನ್ನ ಸ್ನೇಹಿತರೊಂದಿಗೆ ಹರ್ಷದ್ ನನ್ನು ಆಸ್ಪತ್ರೆಗೆ ಧಾಖಲಿಸಿದ್ದಾನೆ. ಅವನ ಪರಿಸ್ಥಿತಿ ಕಂಡು ವಿಚಾರಿಸಿದ ಆಸ್ಪತ್ರೆ ಸಿಬ್ಬಂದಿಗೆ ತಮ್ಮ ಮನೆಯ ಟೆರೇಸಿನಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿದ್ದಾನೆ.
ಆದರೆ ಯುವಕನ ಮೈಮೇಲಿನ ಗಾಯ ಕಂಡು ಅನುಮಾನ ಗೊಂಡ ಆಸ್ಪತ್ರೆಯವರು ಪೊಳೀಸರಿಗೆ ತಿಳಿಸಿದ್ದಾರೆ. ಹರ್ಷದ್ ಮತ್ತು ಹಕೀಂ ಇಬ್ಬರೂ ಅಕ್ಕ-ತಂಗಿಯ ಮಕ್ಕಳಾಗಿದ್ದು, ಒಟ್ಟಿಗೇ ಕೇಬಲ್ ಕೆಲಸ ಮಾಡುತ್ತಿದ್ದರು.
ವೈದ್ಯರು ಚಿಕಿತ್ಸೆ ನೀಡಿದರೂ ಗಂಭೀರ ಗಾಯಗಳಾಗಿದ್ದ ರಿಂದ ಹಾಗೂ ಎಲುಬು ಮುರಿದಿದ್ದರಿಂದ ಹರ್ಷದ್ ಬದುಕುಳಿಯಲಿಲ್ಲ. ಆಸ್ಪತ್ರೆ ವೈದ್ಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಹಕೀಂ ತಾನೇ ತನ್ನ ಸಹೋದರ ಸಂಭಂದಿಗೆ ಹೊಡೆದಿರುವುದಾದಗಿ ತಿಳಿಸಿದ್ದಾನೆ.
ಶುಕ್ರವಾರ ಕೊಲೆಯ ಆರೋಪದ ಮೇಲೆ ಕೊಪ್ಪಂ ಪೊಲೀಸರು ಹಕೀಂನನ್ನು ವಶಕ್ಕೆ ಪಡೆದ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.