ಕೋವಿಡ್ ಟೆಸ್ಟ್ ಮಾಡಿಸಲೆಂದು ಕರೆದೊಯ್ದು ಪತ್ನಿಯ ಕೊಲೆಗೈದ
ಬಳ್ಳಾರಿ : ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಕೋವಿಡ್ ಟೆಸ್ಟ್ ಮಾಡಿಸಲೆಂದು ಕರೆದೊಯ್ದು ಆಕೆಯನ್ನ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ನಗರದ ತಾಳೂರು ರಸ್ತೆಯ ನಿವಾಸಿ ಮಸ್ತಾನ್ ರೆಡ್ಡಿ ಎಂಬಾತ ತನ್ನ ಪತ್ನಿ ಧನ ಲಕ್ಷ್ಮಿ (38)ಯನ್ನು ಕೊಲೆ ಮಾಡಿದ್ದಾನೆ.
ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರೋಣ ಎಂದು ಪತ್ನಿಯನ್ನು ನಗರದ ಟಿ ಬಿ ಸ್ಯಾನಿ ಟೋರಿಯಂ ಬಳಿ ಹೊಸದಾಗಿ ನಿರ್ಮಿಸುತ್ತಿರುವ ಲೇಹೌಟ್ ಬಳಿ ಆಕೆಯನ್ನ ಕರೆತಂದು , ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಇನ್ನೂ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿ ಆಗಾಗ ಜಗಳವಾಗುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ
ಮಸ್ತಾನ್ ರೆಡ್ಡಿಯನ್ನ ಬಂಧಿಸಿದ್ದಾರೆ. ಇನ್ನೂ ಈ ದಂಪತಿಗಳಿಗೆ ಓರ್ವ ಮಗ ಹಾಗೂ ಪುತ್ರಿ ಇದ್ದಾರೆ.
ಆದ್ರೆ ಕೊಲೆಗೆ ಸರಿಯಾದ ನಿಖರ ಕಾರಣ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಕೋವಿಡ್ ಟೆಸ್ಟ್ ಮಾಡಿಸುವ ನೆಪದಲ್ಲಿ ಆಕೆಯನ್ನ ಕರೆದೊಯ್ದು ಹತ್ಯೆಗೈದ ಆರೋಪಿ ತಾನೂ ಜೈಲೂ ಸೇರಿದ್ದು ತನ್ನಿಬ್ಬರು ಮಕ್ಕಳನ್ನ ಅನಾಥರನ್ನಾಗಿಸಿದ್ದಾನೆ.