ಕುಟುಂಬಸ್ಥರಿಂದಲೇ ವ್ಯಕ್ತಿಯೊಬ್ಬನ ಕೊಲೆ Saaksha Tv
ರಾಯಚೂರು: ಕುಟುಂಬಸ್ಥರೆ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿ, ಬೀದಿಗೆ ಬಿಸಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.
ಅಂಬರೀಶ (44) ಇಸ್ಪಿಟ್, ಕುಡಿತದ ಚಟಕ್ಕೆ ಬಿದ್ದು, ಊರಲ್ಲಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಮತ್ತು ಪ್ರತಿದಿನ ಮನೆಗೆ ಕುಡಿದುಕೊಂಡು ಬಂದು ಮನೆಯಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಅಂಬರೀಶ ತಾಯಿ, ಅಕ್ಕ ಮತ್ತು ಅಕ್ಕನ ಮಗ (ಅಳಿಯ) ಮೂವರು ಸೇರಿ ಕೊಲೆ ಮಾಡಿದ್ದಾರೆ.
ಇವರು ಕೊಲೆ ಮಾಡಿದ ಬಳಿಕ ತಮ್ಮ ಮೇಲೆ ಅನುಮಾನ ಮೂಡಬಾರದಂತೆ ಶವವನ್ನು ರಸ್ತೆಯಲ್ಲಿ ಎಸೆದಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. ಸದ್ಯ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.