ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ Mangalore saaksha tv
ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.
ವಿನಾಯಕ್ ಕಾಮತ್ ಮೃತ ವ್ಯಕ್ತಿಯಾಗಿದ್ದು, ಕೃಷ್ಣಾನಂದ್ ಕೊಲೆಯ ಆರೋಪಿಯಾಗಿದ್ದಾರೆ.
ಸೀಮೆಂಟ್ ಹಾಕಿದ ರಸ್ತೆಯಲ್ಲಿ ಕಾರನ್ನ ಚಲಾಯಿಸಿದ ಎಂಬ ಕಾರಣಕ್ಕೆ ನವೆಂಬರ್ 3 ರಂದು ರಾತ್ರಿ 11:00 ಗಂಟೆ ಸುಮಾರಿಗೆ ವಿನಾಯಕ್ ಮತ್ತು ಕೃಷ್ಣಾನಂದ್ ನಡುವೆ ಜಗಳವಾಗಿದೆ.
ಈ ಜಗಳ ತಾರಕಕ್ಕೆ ಏರಿದ್ದು, ಕೃಷ್ಣಾನಂದ್ ಅವರ ಮಗ ಅವಿನಾಶ್, ಚಾಕುವಿನಿಂದ ವಿನಾಯಕ್ ಕಾಮತ್ ಅವರ ಎದೆಯ ಭಾಗಕ್ಕೆ ಇರಿದಿದ್ದಾರೆ.
ಇದರಿಂದ ವಿನಾಯಕ್ ಅವರಿಗೆ ತೀವ್ರ ರಸ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನ ಈ ಸಂಬಂಧ ಮಂಗಳೂರು ನಾರ್ತ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









