ಜಾರ್ಖಂಡ್ ನಲ್ಲಿ ಕನ್ನಡಿಗರ ಕೊಲೆ
ಜಾರ್ಖಂಡ್ : ಇಲ್ಲಿನ ಗುಮ್ಲಾದಲ್ಲಿ ವಾಸವಾಗಿ ಕೃಷಿ ಮಾಡುತ್ತಿದ್ದ ಇಬ್ಬರು ಕನ್ನಡಿಗರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಗುಮ್ಲಾದ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೈಸೂರಿನನ ಲೋಕೇಶ್ ಪುಟ್ಟಸ್ವಾಮಿ, ದೇವದಾಸು ಕೊಲೆಯಾದ ವ್ಯಕ್ತಿಗಳಲಾಗಿದ್ದಾರೆ.
ಲೋಕೇಶ್ ಕಳೆದ 15 ವರ್ಷಗಳಿಂದ ಇಲ್ಲಿ ವಾಸವಾಗಿ ಬಾಳೆ ಬೆಳೆ ಬೆಳೆಯುತ್ತಿದ್ದನು. ಕಳೆದ ಮೂರು ತಿಂಗಳ ಹಿಂದೆ ಮೀನು ಸಾಕಣೆಗಾಗಿ ತನ್ನ ಸಹಚರನೊಬ್ಬನಿಗೆ ಗುಮ್ಲಾಕ್ಕೆ ಕರೆತಂದಿದ್ದನು.
ಇಂದು ಬೆಳಗ್ಗೆ ಆಟೋ ಚಾಲಕನೊಬ್ಬ ಸೌತೆಕಾಯಿ ತೆಗೆದುಕೊಳ್ಳಲು ಬಾಳೆ ತೋಟಕ್ಕೆ ಬಂದಾಗ ಮನೆಯ ಹೊರಗಡೆ ರಕ್ತದ ಮಡುವಿನಲ್ಲಿ ದೇವದಾಸು ಮೃತದೇಹ ಇದ್ದಿದ್ದನ್ನು ನೋಡಿದ್ದಾನೆ.
ಈ ವೇಳೆ ಘಾಗ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಮಾನಂದ್ ಹಾಗೂ ಎಸ್ಎಚ್ಒ ಆಕಾಶ್ ಕುಮಾರ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ, ಲೋಕೇಶ್ ಅವರ ಮೃತದೇಹ ಮನೆಯ ಕೋಣೆಯಲ್ಲಿ ಸಿಕ್ಕಿದೆ.
ಇನ್ನು ಈ ಸಂಬಂಧ ಘಾಗ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.









