ಆರ್.ಎಸ್.ಎಸ್ ನ ರಾಷ್ಟ್ರೀಯ ಮುಖಂಡ ಮೋಹನ್ ಭಾಗವತ್ ಅವರನ್ನು ಹತ್ಯೆ ಮಾಡಲು ಸಂಚು ನಡೆಯುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ವಿಧಾನ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಮುಖಂಡರ ಮೇಲೆ ಹತ್ಯೆ ಸಂಚು ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ಕ್ರಮ ಕೈಗೊಂಡಿದೆ. ಸೂಕ್ತ ಭದ್ರತೆ ಕೈಗೊಂಡಿದ್ದರಿಂದ ಅವರ ಹತ್ಯೆ ಸಂಚು ತಪ್ಪಿರಬಹದು. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ನಮ್ಮ ಹಿರಿಯ ನಾಯಕರನ್ನು ಹತ್ಯೆ ಮಾಡುವ ಯತ್ನ ನಡೆಸಿದ್ದಾರೆ. ಆದರೆ ಭಯೋತ್ಪಾದಕರ ಯತ್ನ ವಿಫಲವಾಗಿದೆ ಎಂದು ಹೇಳಿದರು.
ಇದೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ ರವಿ

ರಾಷ್ಟ್ರೀಯ ವಾದಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸುವುದು ಹೊಸದಲ್ಲ.ಸರಸಂಘಚಾಲಕರ ಮೇಲೆ ಹತ್ಯೆ ಸಂಚು ಈ ಹಿಂದೆಯೂ ಮಾಡಲಾಗಿದೆ. ನಮ್ಮ ಪೊಲೀಸ್ ರು ನಿಗಾವಹಿಸಿ ಸಂಚನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿದರು








