ಬೆಳಗಾವಿಯಲ್ಲಿ ಗುಂಡಿನ ಸದ್ದು, – ಉದ್ಯಮಿ ಕೊಲೆ ಕೇಸ್ ಆರೋಪಿ ಮೇಲೆ ಪೊಲೀಸರ ಫೈರಿಂಗ್
ಬೆಳಗಾವಿಯಲ್ಲಿ ಬೆಳ್ಳಂ ಬೆಳಿಗ್ಗೆ ಪೊಲೀಸರು ಗುಂಡಿನ ಸದ್ದು ಮಾಡಿದ್ದಾರೆ. ಬೆಳಗಾವಿ ಉದ್ಯಮಿ ಕೊಲೆ ಕೇಸ್ ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಶಾಲ ಸಿಂಗ್ ಕಾಲಿಗೆ ಪೊಲೀಸ್ ಫೈರಿಂಗ್ ನಡಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ 3 ಗಂಟೆಗೆ ಆರೋಪಿ ಬಂಧನಕ್ಕೆ ಎಸಿಪಿ ಬರಮನಿ & ಟಿಂ ತೆರಳಿದೆ. ಈ ವೇಳೆ ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ವಿಶಾಲ್ ಬೆಳಗಾವಿ ಕ್ರೈಂ ಎಸಿಪಿ ನಾರಾಯಣ ಬರಮಣಿ ಆರೋಪಿ ಎಡಗಾಲಿಗೆ ಎರಡು ಸುತ್ತು ಫೈರಿಂಗ್ ನಡೆಸಿದ್ದಾರೆ.
ಬೆಳಗಾವಿ ಉದ್ಯಮಿ ರಾಜು ದೊಡ್ಡಣ್ಣವರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಶಾಲ್ ಚೌಹಾಣ್ ಮೇಲೆ ಬೆಳಗಾವಿಯ ವೀರಭದ್ರೇಶ್ವರ ನಗರದ ಕೊಯ್ಲಾ ಹೋಟೆಲ್ ಬಳಿ ಫೈರಿಂಗ್ ನಡೆಸಲಾಗಿದೆ.
ಬೆಳಗಾವಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನ ಬಂಧಿಸಿ, ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.