resorಶಿಮ್ಲಾ: ಮದ್ಯ ಹಾಗೂ ಆಹಾರ ನಿರಾಕರಿಸಿದ್ದಕ್ಕೆ ರೆಸಾರ್ಟ್ ಮ್ಯಾನೇಜರ್ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಪೊಲೀಸ್ ಪೇದೆಗಳೇ ಹತ್ಯೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ರೆಸಾರ್ಟ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನ್ ಸ್ಟೇಬಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಹಿಮಾಚಲ ಪ್ರದೇಶದ ಡಾಲ್‌ಹೌಸಿ ಬಳಿಯ ಬನಿಖೇತ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ತಡರಾತ್ರಿ ಮೂವರು ಕಾನ್‌ಸ್ಟೇಬಲ್‌ಗಳು ರೆಸಾರ್ಟ್‌ಗೆ ತೆರಳಿ ಆಹಾರ ಹಾಗೂ ಮದ್ಯ ಕೇಳಿದ್ದಾರೆ. ಆಗ ಯಾರು ಸಿಬ್ಬಂದಿಗಳಿಲ್ಲ ಎಂದು ಸ್ವಾಗತಕಾರಿಣಿ ಹೇಳಿ ಆಹಾರ ಮತ್ತು ಮದ್ಯ ನೀಡಲು ನಿರಾಕರಿಸಿದ್ದರು. ಇದರಿಂದಾಗಿ ಸ್ವಾಗತಕಾರಿಣಿ ಹಾಗೂ ಪೇದೆಗಳ ಮಧ್ಯೆ ಗಲಾಟೆ ನಡೆದಿದೆ.
ಆಗ ಜನರಲ್ ಮ್ಯಾನೇಜರ್ ರಾಜಿಂದರ್ ಆಗಮಿಸಿದ್ದಾರೆ. ಈ ವೇಳೆ ಪೇದೆಗಳು ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ನೆಲಕ್ಕೆ ಕುಸಿದ ಮ್ಯಾನೇಜರ್ ಸಾವನ್ನಪ್ಪಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.








