ರಾಕೇಶ್ ಟಿಕಾಯತ್ ಗೆ ಕೊಲೆ ಬೆದರಿಕೆ : ಟೀ ಮಾರಾಟಗಾರ ಅಂದರ್
ನವದೆಹಲಿ : ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯಲ್ ನ ನಾಯಕ ರಾಕೇಶ್ ಟಿಕಾಯತ್ ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಗೆ ವ್ಯಕ್ತಿಯೋರ್ವ ಕರೆ ಮಾಡಿ, ರಾಕೇಶ್ ಟಿಕಾಯತ್ ಅವರನ್ನ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಕರೆ ಬಂದ ಬಂದೇ ಗಂಟೆಯಲ್ಲಿ ಕರೆ ಮಾಡಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ.
ಆರೋಪಿ ಟೀ ಮಾರಾಟಗಾರನಾಗಿದ್ದು, ಮದ್ಯವ್ಯಸನಿ ಎಂದು ತಿಳಿದುಬಂದಿದೆ. ಆತನನ್ನ ವಿಚಾರಣೆ ನಡೆಸಿ, ಎಲ್ಲಾ ಸಂಪರ್ಕಗಳನ್ನು ಪರಿಶೀಲನೆ ಮಾಡಲಾಗಿದೆ.
ಯಾವುದೇ ಅನುಮಾನಾಸ್ಪದ ವಿಚಾರಗಳು ಕಂಡುಬಂದಿಲ್ಲ. ಈ ಹಿನ್ನೆಲೆ ಕಠಿಣ ಎಚ್ಚರಿಕೆ ನೀಡಿ ಅವನನ್ನು ಬಿಟ್ಟಿದ್ದೇವೆ ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.