ಲಕ್ನೋ: ಇಷ್ಟು ವಯಸ್ಸಾದರೂ ಇನ್ನು ಮದುವೆಯಾಗಿಲ್ಲ. ಮದುವೆ ಯಾವಾಗ ಎಂದು ರೇಗಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಲೆ ಮಾಡಿರುವ ಘಠನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ (Uttar Pradesh) ಬಂದಾ ಪಟ್ಟಣದಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಸುನೀಲ್ ಹಾಗೂ ಕೊಲೆಯಾದ ಆತನ ಅತ್ತಿಗೆಯನ್ನು (Sister in Law) ಆಶಾದೇವಿ ಎನ್ನಲಾಗಿದೆ. ಕೊಲೆಯಾಗಿರುವ ಆಶಾದೇವಿ ತನ್ನ ಮೈದುನಿಗೆ ಮದುವೆ ಬೇಗ ಆಗು ಎಂದು ತಮಾಷೆ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಮಹಿಳೆ ಹಾಗೂ ಆತನ ಮೈದುನ ಬಂದಾ ಪಟ್ಟಣದ ನಿವಾಸಿಗಳು. ಆಶಾದೇವಿ ಸುನೀಲ್ಗೆ ಆಗಾಗ್ಗೆ ಮದುವೆ ವಿಷಯದಲ್ಲಿ ತಮಾಷೆ ಮಾಡುತ್ತಿದ್ದಳು. ತನ್ನ ಅತ್ತಿಗೆಗೆ ತಮಾಷೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದ. ಆದರೂ ಆಶಾ ತಮಾಷೆ ಮುಂದುವರಿಸಿದ್ದಳು. ಟೆರೇಸ್ ಮೇಲಿಂದ ತನ್ನ ಅತ್ತಿಗೆ ಮಲಗಿದ್ದ ಕೊಠಡಿಗೆ ನುಗ್ಗಿ, ನಿದ್ರೆ ಮಾಡುತ್ತಿದ್ದ ಆಶಾಳ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ಹೊರಗೆ ಎಳೆದೊಯ್ದು, ಇಟ್ಟಿಗೆಯಿಂದ ತಲೆಯನ್ನ ಜಜ್ಜಿ, ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ. ನಂತರ ಕಸದ ರಾಶಿಯಿಂದ ಆಕೆಯ ದೇಹ ಮುಚ್ಚಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಶಾದೇವಿ ಕಾಣೆಯಾಗಿದ್ದಕ್ಕೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆಗ ಕಸದ ರಾಶಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಬೇಧಿಸಿದ ಪೊಲೀಸರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.