ಸಪ್ತಗಿರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸಂಗೀತ ಮತ್ತು ನೃತ್ಯ ಥೆರಪಿ covid
ಬೆಂಗಳೂರು ; ಕೋವಿಡ್ 19 ಸೋಂಕಿನ ಎರಡನೇ ಅಲೆ ಜತೆಗೆ ಇದೀಗ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ – ಕಪ್ಪು ಶಿಲೀಂಧ್ರ ಮತ್ತಿತರ ಗಂಭೀರ ಸಮಸ್ಯೆಗಳಿಂದ ಆತಂಕಕ್ಕೊಳಗಾಗಿರುವ ಕೊರೋನಾ ಸೋಂಕಿತರಿಗೆ ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಸಂಗೀತ ಮತ್ತು ನೈತ್ಯ ಥೆರಪಿ ಆರಂಭಿಸಿದೆ.
ಹೆಸರಘಟ್ಟದಲ್ಲಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಈ ವಿನೂತನ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಸೋಂಕಿತರು ಬೇಗ ಗುಣಮುಖವಾಗುವ ವಿಶ್ವಾಸವನ್ನು ವೈದ್ಯಕೀಯ ಸಮೂಹ ವ್ಯಕ್ತಪಡಿಸಿದೆ.
ಕೊರೋನಾ ಸೋಂಕಿತರಲ್ಲಿ ಆತ್ಮ ವಿಶ್ವಾಸ ಮತ್ತು ಧೈರ್ಯ ತುಂಬುವ ಉದ್ದೇಶದಿಂದ ತಜ್ಞ ವೈದ್ಯರು ಚಿಕಿತ್ಸೆ ಜತೆಗೆ ಮನೋಲ್ಲಾಸಕ್ಕೂ ಆದ್ಯತೆ ನೀಡಿದ್ದಾರೆ.
ಪಿಪಿಇ ಕಿಟ್ ಧರಿಸಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಹ ನೃತ್ಯ ಮಾಡಿದರು. ಸೋಂಕಿತರು ಸಹ ಎಲ್ಲವನ್ನೂ ಮರೆತು ಸಾಮೂಹಿಕವಾಗಿ ಅಮಿತೋತ್ಸಾಹದಿಂದ ಕುಣಿದು ಕುಪ್ಪಳಿಸಿದರು.