ತರಗತಿಗಳಿಗೆ ಹಾಜರಾಗದ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು Saaksha Tv
ಉಡುಪಿ: ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ವಿದ್ಯಾರ್ಥಿಗಳೂ ತರಗತಿಯಿಂದ ಹೊರ ನಡೆದು ಅವರಿಗೆ ಬೆಂಬಲವಾಗಿ ನಿಂತಿರುವ ಘಟನೆ ಉಡುಪಿಯ ಮಿಲಾಗ್ರೀಸ್ ಕಾಲೇಜಿನಲ್ಲಿ ನಡೆದಿದೆ
ಮಿಲಾಗ್ರೀಸ್ ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ. ಆಗ ಕಾಲೇಜಿನ ಸಿಬ್ಬಂದಿಗಳು ತರಗತಿಗಳಿಗೆ ಹಾಜರಾಗಲು ಪ್ರವೇಶ ನೀಡಿಲ್ಲ. ಇದರಿಂದ ವಿದ್ಯಾರ್ಥನಿಯರು ಕಾಲೇಜಿನ ಹೊರಗಡೆ ನಿಂತಿದ್ದಾರೆ. ಆಗ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ನಾವು ಕೂಡ ತರಗಿತಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತಿದ್ದಾರೆ.
ಅಲ್ಲದೇ ನಮ್ಮ ಧರ್ಮ ಪಾಲನೆ ಮಾಡಬೇಕು ಎಂದು ಸಂವಿಧಾನದಲ್ಲೇ ಬರೆದಿದೆ. ಇದೀಗ ಶಿಕ್ಷಣ ಧರ್ಮಕ್ಕೆ ಅಡ್ಡಯಾಗುತ್ತಿದೆ. ಭಾರತದಲ್ಲಿ ಧರ್ಮ ಪಾಲಿಸಬಾರದು ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಮಾತನಾಡಿದ್ದಾರೆ.
ರಾಷ್ಟ್ರ ಗೀತೆಯಲ್ಲೇ ಇದೆ ಅಣ್ಣ ತಂಗಿಯಂದಿರು ಎಂದು. ಅವರು ಹೊರಗಡೆ ಹೋಗಿ ಕುಳಿತಿರುವಾಗ ನಮಗೆ ಮಾತ್ರ ಒಳಗೆ ತರಗತಿ ನಡೆಸಿದರೆ ಅದು ಸರಿನಾ? ಹೀಗಾಗಿ ಅವರಿಗೆ ನಾವು ಬೆನ್ನೆಲುಬಾಗಿ ಸಹಾಯ ಮಾಡುತ್ತಿದ್ದೇವೆ ಎಂದರು.
ಅವರು ಹೇಳಿದ ತಕ್ಷಣ ಹಿಜಾಬ್ ತೆಗೆಯಲು ಸಾಧ್ಯವಿಲ್ಲ. ಅದು ತೆಗೆಯಬಾರದು ಎಂದು ಧರ್ಮದಲ್ಲೇ ಇದೆ. ಇದೀಗ ಹಿಜಬ್ ತೆಗಿಬೇಕು ಎಂದು ನಿಯಮ ಮಾಡಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಬಿಡದೆ ಹೊರಗೆ ಕಳುಹಿಸಿದ್ದಾರೆ. ಅವರಿಗೆ ಪರೀಕ್ಷೆ ಬರೆಯಲು ಬಿಡಲ್ಲ ಎಂದಾದರೆ ನಾವೂ ಬರೆಯಲ್ಲ ಎಂದು ವಿದ್ಯಾರ್ಥಿಗಳು ಧರಣಿ ಕೂತಿದ್ದಾರೆ.
ನಮ್ಮ ಸ್ನೇಹಿತರಿಗೆ ಹಿಜಬ್ ಧರಿಸಿ ತರಗತಿಗೆ ಪ್ರವೇಶ ನೀಡಿದರೆ ನಾವೆಲ್ಲರೂ ಹೋಗಿ ತರಗತಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಮಿಲಾಗ್ರೀಸ್ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.









