ದೈವ ದರ್ಶನದ ವೇಳೆ ಮುಸ್ಲಿಂ ಮಹಿಳೆಗೆ ಆವೇಶ
ಮೂಡಬಿದ್ರೆ : ಕರಾವಳಿ ದೈವದ ದರ್ಶನದ ವೇಳೆ ಮುಸ್ಲಿಂ ಮಹಿಳೆಯೊಬ್ಬರಿಗೆ ಆವೇಶ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂಡಬಿದ್ರೆಯ ಗಂಟಾಲ್ ಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ.
ಕಳೆದ ಭಾನುವಾರ ಮೂಡಬಿದ್ರೆಯ ಗಂಟಾಲ ಕಟ್ಟೆಯಲ್ಲಿರುವ ಕೊರಗಜ್ಜ ದೈವದ ಗುಡಿಯಲ್ಲಿ ನೇಮ ನಡೆದಿತ್ತು.
ದೈವದ ದರ್ಶನ ಪಾತ್ರಿಯು ಆವೇಶಭರಿತರಾಗಿದ್ದ ವೇಳೆ ಕೊರಗಜ್ಜನ ದೈವದ ದರ್ಶನಕ್ಕೆ ಬಂದಿದ್ದ ಮುಸ್ಲಿಂ ಮಹಿಳೆಗೆ ಆವೇಶ ಬಂದಿದೆ.
ಈ ವೇಳೆ ಮಹಿಳೆ ತುಳುವಿನಲ್ಲಿ ಆವೇಶಭರಿತವಾಗಿ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









