ದಾವಣಗೆರೆ : ಕಾಂಗ್ರೆಸ್ ( Congress) ಎಂದರೆ ಮುಸ್ಲಿಂ( Muslims), ಬಿಜೆಪಿ( BJP ) ಅಂದ್ರೆ ಹಿಂದೂ( Hindu) ಎಂಬಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ರಾಜಕಾರಣದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.
ದಾವಣಗೆರೆಯ ಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಪಚುನಾವಣೆ ಹಿನ್ನೆಲೆ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಕ್ಕಲಿಗ ಜಾತಿ ಮತ ಸೆಳೆಯಲು ಪ್ರಯತ್ನಿಸುತ್ತಾರೆ.
ಸಿದ್ದರಾಮಯ್ಯನವರ ಹಿಂದೆ ಕುರುಬರನ್ನು ಬಿಟ್ಟರೆ ಯಾವ ಅಹಿಂದದವರೂ ಇಲ್ಲ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ನಾಯಕರು ಜಾತಿ ಬಳಸಿಕೊಳ್ಳುತ್ತಿದ್ದಾರೆ.
ನಾನು ಇದನ್ನು ಕಟುವಾಗಿ ವಿರೋಧಿಸುತ್ತೇನೆ. ಇವರೆಲ್ಲಾ ಅವರವರ ಜಾತಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ : ಶೋಷಿತರ ಸೇವೆ ಮಾಡಲು ಶ್ರೀರಾಮುಲು ಅತ್ಯಂತ ಸೂಕ್ತ ವ್ಯಕ್ತಿ : ಈಶ್ವರಪ್ಪ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ನಲ್ಲಿರಲಿ ಬಿಡಲಿ ಮುಸಲ್ಮಾನರು ಕಾಂಗ್ರೆಸ್ ಗೆಯೇ ಮತ ಹಾಕುವುದು. ಕಾಂಗ್ರೆಸ್ ಎಂದರೆ ಮುಸ್ಲಿಂ, ಬಿಜೆಪಿ ಅಂದ್ರೆ ಹಿಂದೂ ಎಂಬಂತಾಗಿದೆ ಎಂದರು.
ಇದೇ ವೇಳೆ ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ದೊರಕಿಸಿಕೊಡುವ ಬಗ್ಗೆ ನೇತೃತ್ವ ವಹಿಸಿ ಎಂದು ಕಾಗಿನೆಲೆ ಶ್ರೀಗಳು ಹಾಗೂ ಕುರುಬ ಸಮಾಜದ ಮುಖಂಡರು ಮನೆಗೆ ಬಂದು ಮನವಿ ಮಾಡಿದ್ದಾರೆ. ನಾನು ಇಲ್ಲ ಎಂದು ಹೇಳಲು ಸಾಧ್ಯವೇ?
ಹಿಂದಿನಿಂದಲೂ ಈ ಫೈಲು ದೆಹಲಿಯಿಂದ ಇಲ್ಲಿಗೆ, ಇಲ್ಲಿಂದ ದೆಹಲಿಗೆ ಹೋಗಿ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕೊಂಡಿಯಾಗಿ ಕೆಲಸ ಮಾಡಬೇಕೆಂಬ ಅಪೇಕ್ಷೆ ಇಟ್ಟುಕೊಂಡು ಕರೆದಿದ್ದಾರೆ.
ಕೇವಲ ಕುರುಬ ಸಮಾಜ ಮಾತ್ರವಲ್ಲ, ಉಪ್ಪಾರ ಸಮಾಜದ ಶ್ರೀಗಳು, ಸವಿತಾ ಹಾಗೂ ಕೋಳಿ ಸಮುದಾಯದವರು ನೇತೃತ್ವ ವಹಿಸುವಂತೆ ಮನವಿ ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಶೋಭಾ ಕರಂದ್ಲಾಜೆ ಜ್ಯೋತಿಷಿ ಅಲ್ಲ : ಉಮಾಶ್ರೀ ವಾಗ್ದಾಳಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel