ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ ಮುಸ್ಲಿಂ ವರ್ತಕರು
ಮಂಗಳೂರು: ಹಿಜಾಬ್ ಸಂಭಂದ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಬೆಂಬಲಿಸಿ ಮಂಗಳೂರಿನಲ್ಲಿ ಮುಸ್ಲಿಂ ಅಂಗಡಿ ಮುಗ್ಗಟ್ಟುಗಳು ಬಂದಾಗಿವೆ.
ಕರ್ನಾಟಕ ಅಮೀರ್ ಎ ಶರೀಯತ್ನ ಮೌಲನಾ ಸಗೀರ್ ಅಹ್ಮದ್ ಅವರು ಕರೆ ನೀಡಿರುವ ರಾಜ್ಯ ಬಂದ್ಗೆ ವಿವಿಧ ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಮಂಗಳೂರಿನಲ್ಲಿ ಮುಸ್ಲಿಂ ವರ್ತಕರು ತಮ್ಮ ವ್ಯಾಪಾರವನ್ನು ಬಂದ್ ಮಾಡಿದ್ದಾರೆ.
ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿ ಇಂದು ಮುಸ್ಲಿಂ ವರ್ತಕರು ವ್ಯಾಪಾರ ಮಾಡಲು ಹಾಜರಾಗದೇ ಇರುವುದು ಕಂಡು ಬಂದಿದ್ದು, ಮುಸ್ಲಿಂ ವರ್ತಕರ ವ್ಯಾಪಾರ ನಡೆಯುವ ಸ್ಥಳ ಬಂದ್ ಆಗಿತ್ತು.
ಅದೇ ರೀತಿಯಲ್ಲಿ ಮುಸ್ಲಿಂ ವರ್ತಕರು ಹೆಚ್ಚಾಗಿರುವ ಬಂದರ್, ಕುದ್ರೋಳಿ, ಸ್ಟೇಟ್ ಬ್ಯಾಂಕ್ನ ರಸ್ತೆ ಬದಿ, ಮಾರ್ಕೆಟ್ ರಸ್ತೆಗಳಲ್ಲಿ ವ್ಯಾಪಾರ ಸ್ಥಗಿತಗೊಂಡಿದೆ. ಮುಸ್ಲಿಂ ವ್ಯಾಪಾರಿಗಳ ವ್ಯಾಪಾರ ಬಂದ್ ಹೊರತುಪಡಿಸಿ ಇತರ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದೆ.









