ಮುಸ್ಲಿಂರು ತಾಕತ್ತಿದ್ದರೆ ನಿಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಸಿ : RSS ಮುಖಂಡ
ಯಾದಗಿರಿ: ಮುಸ್ಲಿಂರು ತಾಕತ್ತಿದ್ದರೆ ನಿಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಸಿ ಎಂದು RSS ಮುಖಂಡ ಡಾ.ಹಣಮಂತ ಮಳಲಿ ಸವಾಲೆಸದಿದ್ದಾರೆ.
ಮುಂದುವೆರದು ಗಂಡಸ್ತನ ಇದ್ದರೆ ಹಿಜಾಬ್ ನ್ನು ಸಿನಿಮಾ ನಟಿಯರಿಗೆ, ಶಾರುಖಾನ್ ಮಗಳಿಗೆ ತೊಡಿಸಿ. ಹಿಜಾಬ್ ಹಾಕಿಸಿ ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದೀರಿ. ಕಾನೂನು ಪಾಲೆನೆ ಮಾಡಿ ಅಂತ ಕೋರ್ಟ್ ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ಹಿಜಾಬ್ ನಿಂದ ಹಿಂದೂಗಳು ಎಚ್ಚರವಾಗಿದ್ದಾರೆ. ಹಿಜಾಬನ್ನು ಮನೆ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕೊಳ್ಳಲಿ. ತಾಕತ್ ಇದ್ದರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಬ್ ಹಾಕಿಸಿ ಎಂದು ಕಿಡಿಕಾರಿದರು.
ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಭಂದ ಕುರಿತು: ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದರೆ ಕೊಡೋದು ಇನ್ಮುಂದೆ ನಡೆಯಲ್ಲ. ಇದರಿಂದಾಗಿ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತೆ. ಮುಸಲ್ಮಾನರೇ ಹೇಳಿಕೊಟ್ಟಿದ್ದು ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ. ಮೊದಲು ಹೇಳಿಕೊಟ್ಟಿದ್ದು ನೀವೇ, ಈಗ ಹಿಂದೂಗಳು ಮಾಡುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಇನ್ನೂ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವವರೆಗೂಹಿಂದುಗಳು ಜನಸಂಖ್ಯೆ ನಿಯಂತ್ರ ಮಾಡಬಾರದು. ಎರಡು ಇದ್ದವರು ಮೂರು, ಮೂರು ಇದ್ದವರು ನಾಲ್ಕು, ನಾಲ್ಕು ಇದ್ದವರು ಮಕ್ಕಳನ್ನು ಮಾಡಿ. ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡುತ್ತಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇನ್ಮುಂದೆ ನಡೆಯಲ್ಲ. ಮದುವೆ ವಯಸ್ಸಿಗೆ ಬಂದವರು 23 ಕೋಟಿ ಹಿಂದೂ ತರುಣರಿದ್ದಾರೆ ಎಂದು ಹೇಳಿದರು.
ಕಲ್ಲಂಗಡಿ ಹೊಡೆದಿದ್ದಾರಂತೆ, ಅವರಿಗೆ 10 ಸಾವಿರ ರೂ. ಕೊಟ್ಟಿದ್ದಾರೆ. ಅವರೇನು ಇವರ ಅಕ್ಕನ ಮಕ್ಕಳಾ..? ನಿಮಗೆ ಗಂಡಸ್ತನ ಇದ್ದರೆ ಕಲ್ಲಂಗಡಿ ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ನಮ್ಮ ಹಿಂದೂಗಳ ತಲೆ ಹೊಡೆದಿದ್ದಾರಲ್ವಾ. ಈ ವಿಚಾರ ನಿಮಗೆ ಗೊತ್ತಿಲ್ಲವೇನೋ. ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಇವರು ಬಹುಮಾನ ಕೊಟ್ಟು ಬರ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.