ಉಚಿತವಾಗಿ ನನ್ನ ಸಿನಿಮಾ ತೋರಿಸ್ತೀನಿ : ಪವನ್ ಸವಾಲು Pawan saaksha tv
ಬಹುದೊಡ್ಡ ಸಿನಿಮಾ ಮಾರ್ಕೆಟ್ ಹೊಂದಿರುವ ಟಾಲಿವುಡ್ ಗೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಶಾಕ್ ನೀಡಿದೆ.
ಟಿಕೆಟ್ ದರದ ಮೇಲೆ ಸರ್ಕಾರದ ನಿಯಂತ್ರಣ ಬೇಡ ಎಂದು ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗವು ಸಿಎಂ ಜಗನ್ ಮೋಹನ್ ರೆಡ್ಡಿಗೆ ಮನವಿ ಮಾಡಿತ್ತು.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸ್ಪಂದಿಸಿರುವ ಜಗನ್ ಮೋಹನ್, ಟಿಕೆಟ್ ದರ ಹೆಚ್ಚಳದ ಬದಲಿಗೆ ರಾಜ್ಯದಾದ್ಯಂತ ಚಿತ್ರಮಂದಿರಗಳ ಟಿಕೆಟ್ ಅನ್ನು ರಾಜ್ಯ ಸರ್ಕಾರವೇ ಮಾರಾಟ ಮಾಡುತ್ತದೆ ಎಂದು ಆದೇಶ ನೀಡಿದೆ.
ತೆಲುಗು ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಖ್ಯವಾಗಿ ಈ ವಿಚಾರವಾಗಿ ಪವರ್ ಸ್ಟಾರ್ ಪವನ್ ಕಳ್ಯಾಣ್ ಎಂದಿನಂತೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
”ನನ್ನ ಸಿನಿಮಾಗಳನ್ನು ತಡೆದು ಬಿಟ್ಟರು. ನನ್ನ ಸಿನಿಮಾಗಳನ್ನು ತಡೆವ ಮೂಲಕ ನನ್ನ ಆರ್ಥಿಕ ಮೂಲಗಳನ್ನು ಬಂದ್ ಮಾಡಿ ನನ್ನನ್ನು ಹೆದರಿಸಲು ನೋಡಿದರು.
ಆದರೆ ನಾನು ಹೆದರುವ ವ್ಯಕ್ತಿ ಅಲ್ಲ. ನಾನು ಮನಸ್ಸು ಮಾಡಿದರೆ ನನ್ನ ಸಿನಿಮಾಗಳನ್ನು ಇಡೀ ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಬೇಕಾದರೆ ತೋರಿಸುತ್ತೀನಿ” ಎಂದು ಸವಾಲು ಹಾಕಿದ್ದಾರೆ.
ಇನ್ನು ಆಂಧ್ರ ಪ್ರದೇಶದಲ್ಲಿ ಜನಸೇನಾ ಪಾರ್ಟಿ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಜಗನ್ ಮೋಹನ್ ರೆಡ್ಡಿ ಮಧ್ಯೆ ಗುದ್ದಾಟ ನಡೆಯುತ್ತಲೇ ಇದೆ. ಬಹಿರಂಗ ಸಭೆಗಳಲ್ಲಿ ಒಬ್ಬರಿಗೊಬ್ಬರು ಕಚ್ಚಾಡುತ್ತಲೇ ಇದ್ದಾರೆ.
ಇದಲ್ಲದೇ ಜಗನ್ ಸರ್ಕಾರದ ಈ ನಿರ್ಧಾರ ಟಾಲಿವುಡ್ ಸಿನಿಮಾ ಮಂದಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ರಿಲೀಸ್ ಗೆ ಸಿದ್ಧವಾಗಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪಾ.. ರಾಮ್ ಚರಣ್, ಜ್ಯೂನಿಯರ್ ಎನ್ ಟಿ ಆರ್ ನಟನೆಯ ಆರ್ ಆರ್ ಆರ್ ಸಿನಿಮಾದ ನಿರ್ಮಾಪಕರಿಗೆ ನಡುಕ ಹುಟ್ಟಿಸಿದೆ.









