ಶಿವಮೊಗ್ಗ: ಸುಮೊಟೋ ಕೇಸ್ ಗಳಿಗೆ ಯಾವುದೇ ಕಾರಣಕ್ಕೂ ಅಂಜುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರದಲ್ಲಿ ಸರಕಾರ ಕ್ರಮ ಕೈಗೊಳ್ಳದಿದ್ದರೆ ಜನರು ಮುಸ್ಲಿಂರ ವಿರುದ್ಧ ದಂಗೆ ಏಳಬಹುದು ಎಂದು ನಾನು ಎಚ್ಚರಿಸಿದ್ದೆ. ಇದನ್ನು ಪ್ರಚೋದನಾಕಾರಿ ಹೇಳಿಕೆ ಅಂತಾ ಕರೆದರೆ ನಾನು ಹೆದರುವುದಿಲ್ಲ ಎಂದಿದ್ದಾರೆ.
ಬಾಂಗ್ಲಾ ಮುಸಲ್ಮಾನರ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳಿಗೆ ಏನು ಸಮಸ್ಯೆ? ಬಾಂಗ್ಲಾದಲ್ಲಿನ ರಾಕ್ಷಸಿ ಕೃತ್ಯ ಖಂಡಿಸಿದ್ದೇನೆ. ದೇಶದಲ್ಲಿನ ದೇಶಭಕ್ತ ಮುಸ್ಲಿಂರ ಬಗ್ಗೆ ನಾನು ಯಾವತ್ತೂ ಕೆಟ್ಟದ್ದಾಗಿ ಮಾತನಾಡಿಲ್ಲ. ಯಾರನ್ನೊ ತೃಪ್ತಿಪಡಿಸಲು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಯಾರು ಪ್ರಚೋದನೆ ನೀಡಿದ್ದಾರೆ ಎಂಬುವುದು ಗೊತ್ತಿಲ್ಲ ಎಂದಿದ್ದಾರೆ.
ದೇಶ ಹಾಗೂ ಧರ್ಮ ದ್ರೋಹಿಗಳ ವಿರುದ್ಧ ನನ್ನ ಹೋರಾಟ ಸದಾ ಕಾಲ ಮುಂದುವರೆಯುತ್ತದೆ. ಇಂತಹ ಕೇಸ್ ಗಳಿಗೆ ನಾನು ಹೆದರುವುದಿಲ್ಲ ಎಂದಿದ್ದಾರೆ.