ನನ್ನ ಎದೆ ಬಗೆದರೂ ಅದರಲ್ಲಿ ಯಡಿಯೂರಪ್ಪ ಇದ್ದಾರೆ, ಬಗೆದು ತೋರಿಸ್ಲಾ- ರೇಣುಕಾಚಾರ್ಯ

ಬೆಂಗಳೂರು, ಜೂನ್ 10: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನನ್ನ ಎದೆ ಬಗೆದರೂ ಅದರಲ್ಲಿ ಯಡಿಯೂರಪ್ಪ ಕಾಣಿಸುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯ ಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ ಬಿಜೆಪಿ ಪಕ್ಷದಲ್ಲಿ ಮಾತ್ರ ತಳ ಮಟ್ಟದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.
ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಇಬ್ಬರು ನಾಯಕರನ್ನು ಆಯ್ಕೆ ಮಾಡಿದ್ದು, ನಾವೆಲ್ಲರೂ ಹೈಕಮಾಂಡ್ ಮಾತಿಗೆ ಬದ್ಧ ಎಂದರು.
ಮಾಧ್ಯಮದವರು ರಾಜ್ಯಸಭೆಗೆ ಬಿಜೆಪಿ ಟಿಕೆಟ್ ವಿಚಾರದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಗಮನವನ್ನು ಕೊಟ್ಟಿದ್ದೀರಿ. ನೀವು ಏನೂ ಬೇಕಾದರೂ ಸುದ್ದಿ ಮಾಡಿ ಎಂದು ಮಾಧ್ಯಮದವರಿಗೆ ಹೇಳಿದ ರೇಣುಕಾಚಾರ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಎದೆ ಬಗೆದರೂ ಅದರಲ್ಲಿ ಇರುತ್ತಾರೆ. ಬಗೆದು ತೋರಿಸ್ಲಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ನಮ್ಮ ನಡುವೆ ಯಾವುದೇ ಭಿನ್ನಮತವಲ್ಲ. ಬಿಜೆಪಿಯಲ್ಲಿ
ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಹಾಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ನಿರಾಸೆಯಾಗಿದೆ ಎಂದು ಹೇಳಿದ ರೇಣುಕಾಚಾರ್ಯ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಗ ಸರ್ಕಾರಿ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸುತ್ತಿದ್ದರು. ಆದರೆ ವಿಜಯೇಂದ್ರ ಹಾಗೇನೂ ಮಾಡುತ್ತಿಲ್ಲ ಎಂದು ಈ ಮೊದಲು ಹೇಳಿದ್ದರು.








