ಬೆಳಗಾವಿ: ನನಗೆ ಜೀವ ಬೆದರಿಕೆ ಇದೆ ಎಂದು ಬಿಜೆಪಿ ಶಾಸಕ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಠಾಣೆಯಲ್ಲಿ ಸುದ್ದಿಗಾರೊರಂದಿಗೆ ಮಾತನಾಡಿದ ಅವರು, ಡಿಸಿಎಂ ಶಿವಕುಮಾರ್ (DK Shivakumar) ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನನಗೆ ಬೆದರಿಕೆ ಹಾಕಿದ್ದಾರೆ. ಪೊಲೀಸರಿಂದ ಜೀವಕ್ಕೆ ಅಪಾಯವಿದೆ. ಅನುಮಾನಾಸ್ಪದವಾಗಿ, ನಿಗೂಢವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಮೇಲೆ ಯಾವ ಕೇಸ್ ಹಾಕಿದ್ದಾರೆ ಎಂದು ಮಾಹಿತಿ ನೀಡಿಲ್ಲ. ನನ್ನನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದಿದ್ದಾರೆ. ಸುವರ್ಣಸೌಧದಲ್ಲಿ ನನ್ನ ಮೇಲೆ ಕೊಲೆ ಪ್ರಯತ್ನ ನಡೆಯಿತು. ಕೊಲೆ ಪ್ರಯತ್ನದ ಬಗ್ಗೆ ಸಭಾಪತಿಗೂ ದೂರು ನೀಡಿದ್ದೇನೆ ಎಂದು ಆರೋಪಿಸಿದ್ದಾರೆ.
ನಾನು ಕೂಡ ಈ ಕುರಿತು ದೂರು ನೀಡಿದ್ದೇನೆ. ಕಳೆದ 2 ಗಂಟೆಯಿಂದ ಎಫ್‌ಐಆರ್ ಮಾಡಿ ಎಂದು ಒತ್ತಾಯಿಸಿದ್ದೇನೆ. ನಮಗೆ ಎಫ್‌ಐಆರ್ ಕಾಪಿ ನೀಡುತ್ತಿಲ್ಲ. ಪೊಲೀಸರ ನಡೆ ಅನುಮಾನಸ್ಪದವಾಗಿದೆ. ಇವರದು ಹಿಡನ್ ಅಜೆಂಡಾ ಇದ್ದ ಹಾಗೆ ಕಾಣುತ್ತಿದೆ. ಇದರ ಹಿಂದಿನ ದುರುದ್ದೇಶ ನನಗೆ ತಿಳಿಯುತ್ತಿಲ್ಲಾ ಎಂದು ಆರೋಪಿಸಿದ್ದಾರೆ.








