C M Ibrahim | ಹುಚ್ಚು ಮುಂಡೇವು ಅಧಿಕಾರಕ್ಕೆ ಬಂದು ನಮಗೆ ಹೆದರಿಸುತ್ತಿವೆ
ಮೈಸೂರು : ಹುಚ್ಚು ಮುಂಡೇವು ಅಧಿಕಾರಕ್ಕೆ ಬಂದು ನಮಗೆ ಹೆದರಿಸುತ್ತಿವೆ. 1995 ರಲ್ಲಿ ಜನತಾ ಸರಕಾರ ತದ್ದಂತೆ 2023 ರಲ್ಲೂ ಸರ್ಕಾರ ತರೋಣ ಎಂದು ಸಿಎಂ ಇಬ್ರಾಹಿಂ ಕರೆಕೊಟ್ಟಿದ್ದಾರೆ.
ಮೈಸೂರಿನಲ್ಲಿ ನಡೆದ ಸರ್ವ ಜನಾಂಗದ ಶಾಂತಿಯ ತೋಟ ಸಮಾರಂಭದಲ್ಲಿ ಮಾತನಾಡಿದ ಇಬ್ರಾಹಿಂ, ಹಿಜಾಬ್ ಸೇರಿದಂತೆ ಇತ್ತೀಚಿನ ಬೆಳೆವಣಿಗೆಗಳ ಬಗ್ಗೆ ಬೆಳಕು ಚೆಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತಮ್ಮದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದರು.
ಮೊದಲನೇಯದಾಗಿ ಹಿಜಾಬ್ ಬಗ್ಗೆ ಮಾತನಾಡಿದ ಸರ್ಕಾರದ ವಿರುದ್ಧ ಕಿಡಿಕಾರಿದ ಇಬ್ರಾಹಿಂ, ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಲು ಇವರು ವಿರೋಧಿಸುತ್ತಾರೆ.
ಮೈಸೂರಿನ ಮಹಾರಾಜರು ಹೆಣ್ಣು ಮಕ್ಕಳು ಸ್ಕೂಲ್ ಗೆ ಹೋಗುವ ಗಾಡಿಗೆ ಪರದೆ ಹಾಕಿಸುತ್ತಿದ್ದರು. ಇದನ್ನು ಇವರು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹುಚ್ಚು ಮುಂಡೇವು ಅಧಿಕಾರಕ್ಕೆ ಬಂದು ನಮಗೆ ಹೆದರಿಸುತ್ತಿವೆ. ಗೌಡ್ರ ಮಕ್ಕಳು ಇನ್ನೂ ಬದುಕಿದ್ದಾರೆ. ಸ್ವಸ್ಥ ಸಮಾಜ ಕಟ್ಟುತ್ತೇವೆ. 1995 ರಲ್ಲಿ ಜನತಾ ಸರಕಾರ ತದ್ದಂತೆ 2023 ರಲ್ಲೂ ಸರ್ಕಾರ ತರೋಣ ಎಂದು ಇಬ್ರಾಹಿಂ ಕರೆಕೊಟ್ಟರು.
ಇದೇ ವೇಳೆ ಚಂದ್ರು ಕೊಲೆ ಬಗ್ಗೆ ಗೃಹ ಸಚಿವರ ಗೊಂದಲ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ತಲೆ ಕೆಟ್ಟಿದೆ. ಮಂಗನಿಗೆ ಹೆಂಡ ಕುಡಿಸಿದರೆ ಹೇಗೆ ನೃತ್ಯ ಮಾಡುತ್ತೋ ಹಾಗೇ ಇವರು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. mysore c-m-ibrahim-lashesh-out-at-bjp








