Mysore : ದಸರಾ ಆನೆ ಬಲರಾಮನಿಗೆ ಗುಂಡೇಟು – ಆರೋಪಿ ಅರೆಸ್ಟ್
ಮೈಸೂರು : ದಸರಾ ಆನೆ ಬಲರಾಮನಿಗೆ ಗುಂಡೇಟು ತಾಕಿದೆ..
ಬಲರಾಮನಿಗೆ ಗುಂಡು ಹೊಡೆದವನನ್ನ ಪೊಲೀಸರು ಬಂಧಿಸಿದ್ದಾರೆ..
14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನಿಗೆ ಜಮೀನಿನ ಮಾಲೀಕ ಸುರೇಶ್ ಎಂಬಾತ ಗುಂಡು ಹಾರಿಸಿದ್ದಾನೆ
ಗುರುವಾರ ರಾತ್ರಿ ಘಟನೆ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಸುರೇಶ್ ನನ್ನ ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದ ಆನೆ ಇದು.
ಶಿಬಿರದ ಸಮೀಪದ ಜಮೀನಿಗೆ ಬಲರಾಮ ಹೋಗಿದ್ದ.
ಸಿಟ್ಟಿಗೆದ್ದ ಮಾಲೀಕ ಸುರೇಶ್ ಗುಂಡು ಹಾರಿಸಿದ್ದಾನೆ.
ಆನೆಯ ತೊಡೆ ಬಳಿ ಗುಂಡು ಹೊಕ್ಕಿತ್ತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್‌ರಿಂದ ಚಿಕಿತ್ಸೆ ನೀಡಿದ್ದಾರೆ.
ಸದ್ಯ ಬಲರಾಮ ಚೇತರಿಸಿಕೊಂಡಿದ್ದಾನೆ.
ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ..
ಸಿಂಗಲ್ ಬ್ಯಾರಲ್ ಬಂದೂಕು, ಕಾರ್ಟ್ರಿಜ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.