ಮೈಸೂರು ಒಂದೇ ದಿನದಲ್ಲಿ 281 ಕೊರೊನಾ ಪ್ರಕರಣಗಳು ಪತ್ತೆ
ಮೈಸೂರು, ಜುಲೈ 24: ಮೈಸೂರಿನಲ್ಲಿ ಇಂದು (ಜುಲೈ 24) ಒಂದೇ ದಿನದಲ್ಲಿ 281 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ದಾಖಲೆಯನ್ನು ಮುರಿದಿದೆ. ಈ ಮೊದಲು ಪ್ರತಿ ದಿನ 100, 150 ಮತ್ತು 169 ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿತ್ತು. ಇಂದು ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದರೆ ಮೈಸೂರು ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಇಂದು 2,267 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಮೈಸೂರಿನಲ್ಲಿ ಇಲ್ಲಿಯವರೆಗೆ ಪತ್ತೆಯಾದ ಕೊರೊನಾ ಸೋಂಕಿನ ಸಂಖ್ಯೆಗಳು ಈ ಮೂಲಕ 2,450ಕ್ಕೆ ಏರಿಕೆಯಾಗಿದೆ.

ಇಂದು, ಜಿಲ್ಲೆಯಲ್ಲಿ ಆರು ಜನ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 99 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಮಾಧ್ಯಮ ಬುಲೆಟಿನ್ ನಲ್ಲಿ ಈ ವಿಷಯವನ್ನು ಉಲ್ಲೇಖಿಸಿದೆ. ಇಂದು 18 ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.








