ವಿಶ್ವ ಕ್ರಿಕೆಟ್ ಕಂಡ ಅಪ್ರತಿಮ ವೇಗಿ.. ಒಂದು ಕಾಲದ ಟೀಂ ಇಂಡಿಯಾದ ವೇಗಿಗಳ ಸಾರಥಿ.. ಮೈಸೂರ್ ಎಕ್ಸ್ ಪ್ರೆಸ್ ಎಂದೇ ಪ್ರಖ್ಯಾತಿ ಪಡೆದಿದ್ದ ಜಾವಗಲ್ ಶ್ರೀನಾಥ್ ಅವರು ಇಂದು 21ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾದ ಬೌಲರ್ ಆಗಿ ದೇಶಕ್ಕಾಗಿ ಹಲವಾರು ಅವಿಸ್ಮರಣಿಯ ಕ್ಷಣಗಳನ್ನು ಕಟ್ಟಿಕೊಟ್ಟ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರ ಸಂಭ್ರಮದ ಹುಟ್ಟುಹಬ್ಬಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸುನೀಲ್ ಜೋಶಿ ಸೇರಿದಂತೆ ಹಲವಾರು ಮಂದಿ ಗಣ್ಯರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ನಮ್ಮ ಹೆಮ್ಮೆಯ ಕನ್ನಡಿಗ ಜಾವಗಲ್ ಶ್ರೀನಾಥ್ ಹೆಸರು ಭಾರತ ಕಂಡ ಅಪ್ರತಿಮ ವೇಗಿಗಳ ಸಾಲಲ್ಲಿ ಕೂಡ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ನಾಯಕತ್ವದ ಅಡಿಯಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದ ಜಾವಗಲ್ ಶ್ರೀನಾಥ್ ದೇಶಕ್ಕಾಗಿ ಹಲವಾರು ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟಿದ್ದಾರೆ.
ಭಾರತದ ಪರ 229 ಏಕದಿನ ಪಂದ್ಯವನ್ನಾಡಿರುವ ಶ್ರೀನಾಥ್ ಒಟ್ಟು 315 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 300 ಪ್ಲಸ್ ವಿಕೆಟ್ ಪಡೆದ ವಿಶ್ವದ 13ನೇ ಬೌಲರ್ ಆಗಿದ್ದಾರೆ. 67 ಟೆಸ್ಟ್ ಪಂದ್ಯಗಳಿಂದ 236 ವಿಕೆಟ್ ಉರುಳಿಸಿ, ಟೆಸ್ಟ್ ನಲ್ಲಿ 200 ವಿಕೆಟ್ ಗಡಿ ದಾಟಿದ ಭಾರತದ ಎರಡನೇ ಬೌಲರ್ ಆಗಿದ್ದಾರೆ.
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275








