Mysore | ನಾನು ಕೇವಲ ಶಾಸಕ : ಸಿದ್ದರಾಮಯ್ಯಗೆ ಜಿಟಿಡಿ ಸಾಫ್ಟ್ ಟಾಂಗ್
ಮೈಸೂರು : ಈಗಿನ ಚಾಮುಂಡೇಶ್ವರಿ ಶಾಸಕ ಏನು ಕಡೆದು ಕಟ್ಟೆ ಹಾಕಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಜಿ.ಟಿ.ದೇವೇಗೌಡ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಶಾಸಕ, ಸಚಿವ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆದವರು.
ನಾನು ಕೇವಲ ಶಾಸಕ. ಕೆಲವು ತಿಂಗಳ ಮಾತ್ರ ಮಂತ್ರಿಯಾಗಿದ್ದೆ. ನಾನು ಸಿದ್ದರಾಮಯ್ಯ ನವರಷ್ಟು ಕೆಲಸ ಮಾಡಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.

ನಾನು ಯಾವತ್ತು ನಾನೇ ಅಭಿವೃದ್ಧಿ ಮಾಡಿದ್ದೇನೆಂದು ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ಧಾರೆ ಎಂದು ಕ್ರೆಡಿಟ್ ಕೊಟ್ಟಿದ್ದೇನೆ.
ನಾನು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಸಿದ್ದರಾಮಯ್ಯಗೆ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ.
ಒಕ್ಕಲಿಗರು ತಮ್ಮ ಬೆಂಬಲಿಸಬೇಕು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಮಾತನಾಡಿ ಜನರ ಮನಸ್ಥಿತಿ ಈಗ ತೀರ್ಮಾನ ಆಗುವುದಿಲ್ಲ. ಅದಕ್ಕೆ ಇನ್ನೂ ಸಮಯಬೇಕು ಎಂದು ಹೇಳಿದ್ದಾರೆ.








