Mysore – ಟಿಪ್ಪು ಏನ್ ಮೈಸೂರಿನವನಾ – ಪ್ರತಾಪ್ ಸಿಂಹ ಪ್ರಶ್ನೆ
ಮೈಸೂರು :ಟಿಪ್ಪುಗೆ ಮೈಸೂರಿಗೆ ಏನು ಸಂಬಂದ. ಟಿಪ್ಪು ಏನ್ ಮೈಸೂರಿನವನಾ, ಅವನು ಶ್ರೀರಂಗಪಟ್ಟಣದವನು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾವಣೆ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರತಾಪ ಸಿಂಹ, ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ.
ಮಹಾರಾಜರು ಮೈಸೂರಿಗೆ ಕೊಟ್ಟ ನೂರು ಕೊಡುಗೆಗಳನ್ನ ನಾನು ಹೇಳುತ್ತೇನೆ. ಟಿಪ್ಪು ಬೆಂಬಲಿಸುವವರು, ಟಿಪ್ಪು ಕೊಟ್ಟ ಮೂರು ಕೊಡುಗೆಗಳನ್ನ ಹೇಳಲಿ ಸಾಕು ಎಂದು ಹೇಳಿದರು.
ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಒಂದು ಟ್ರೈನ್ ಗೆ ಇಟ್ಟ ಹೆಸರನ್ನ ಬದಲಾಯಿಸಿದ ಉದಾಹರಣೆಗಳೇ ಇಲ್ಲಾ. ಆದ್ರೆ ಇದನ್ನ ಉದ್ದೇಶ ಪೂರ್ವಕವಾಗಿಯೇ ಪ್ರಯತ್ನ ಪಟ್ಟು ಬದಲಾಯಿಸಿದ್ದೇನೆ.
ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ ನಾವು ಪಾಠ ಕಲಿಯುವ ಅಗತ್ಯ ಇಲ್ಲ.
ಟಿಪ್ಪು ಹೆಸರನ್ನ ಜನರ ಮನಸ್ಸಿನಿಂದ ತೆಗೆಯಲು ಆಗಲ್ಲಾ ಎನ್ನುವವರ ಹೆಸರನೇ ಜನ ಮರೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಕೂಡ ಇದೆ ಎಂದು ಕಿಡಿಕಾರಿದ್ದಾರೆ.
ನಾನು ಮೈಸೂರಿಗೆ 10 ಟ್ರೈನ್ ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನ ನಾನು ಮಾಡಿದ್ದೇನೆ.
ಟಿಪ್ಪು ಒಬ್ಬ ಕನ್ನಡ ವಿರೋಧಿ. ಟಿಪ್ಪು ಪರ್ಶಿಯನ್ ಭಾಷೆಯನ್ನ ಹೇರಿದ್ದಾನೆ. ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳು ಪರ್ಶಿಯನ್ ಭಾಷೆಗೆ ಸೇರಿದ್ದು.
ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾನಿಲಯ ಕೂಡ ಮೈಸೂರು ಮಹಾರಾಜರ ಕಟ್ಟಿಸಿದ್ದು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.