Mysore | ಹಿಂದೂ ಧರ್ಮ ರಕ್ಷಣೆಗೆ ಸದಾ ಸಿದ್ಧ : ಯದುವೀರ್ ಒಡೆಯರ್
ಚಾಮರಾಜನಗರ : ಸಮಾನದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲಿಯೇ ಪರಿಹಾರ, ಉತ್ತರವಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಚಾಮರಾನಗರದಲ್ಲಿ ನಡೆದ ಎಬಿವಿಪಿ 41ನೇ ರಾಜ್ಯ ಸಮ್ಮೇಳದಲ್ಲಿ ಮಾತನಾಡಿದ ಯದುವೀರ್, ಮೈಸೂರು ಅರಮನೆ ಈ ಹಿಂದೆಯೂ ಹಿಂದೂ ಧರ್ಮ ರಕ್ಷಣೆಗೆ ಸಿದ್ಧವಾಗಿತ್ತು, ಈಗಲೂ ಧರ್ಮ ರಕ್ಷಣೆಗೆ ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.
ಜೊತೆಗೆ ಧರ್ಮ ರಕ್ಷಣೆ ಅಗತ್ಯವಾಗಿದೆ ಎಂದ ಯದುವೀರ್, ಧರ್ಮ ರಕ್ಷಣೆಗೆ ಜಾತಿ-ಜಾತಿಗಳು ಒಗ್ಗಟ್ಟಾಗಬೇಕು ಎಂದು ಕರೆಕೊಟ್ಟರು. ಇನ್ನು ಧರ್ಮದ ಜೊತೆಗೆ ಪರಿಸರ ರಕ್ಷಣೆಗೂ ನಾವು ಆದ್ಯತೆ ಕೊಡಬೇಕು. ಇದಕ್ಕೆಲ್ಲಾ ಶಿಕ್ಷಣವೇ ಪರಿಹಾರವಾಗಿದೆ. ಶಿಕ್ಷಣದಿಂದಲೇ ಜಾಗೃತಿ ಮೂಡಿಸಬೇಕು ಎಂದರು.









