ಆಂಧ್ರದ ಎಲೂರಿನಲ್ಲಿ ನಿಗೂಢ ಕಾಯಿಲೆಗೆ ಓರ್ವ ವ್ಯಕ್ತಿ ಬಲಿ – ರಾಜ್ಯಕ್ಕೆ ಕೇಂದ್ರ ತಜ್ಞರ ತಂಡದ ತುರ್ತು ಭೇಟಿ Mystery disease Eluru

ಎಲೂರು, ಡಿಸೆಂಬರ್07: ನಿಗೂಢ ಕಾಯಿಲೆಗೆ ಆಂಧ್ರದ ಎಲೂರಿನಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದು, 300 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಕೇಂದ್ರವು ತಜ್ಞರ ತಂಡವನ್ನು ರೋಗದ ಮೂಲ ಪತ್ತೆಗೆ ತುರ್ತಾಗಿ ಕಳುಹಿಸಿ ಕೊಟ್ಟಿದೆ. Mystery disease Eluru
ಆಂಧ್ರಪ್ರದೇಶದ ನಿಗೂಢ ಕಾಯಿಲೆಯು ಒಂದು ಜೀವವನ್ನು ಬಲಿ ತೆಗೆದುಕೊಂಡಿದ್ದು, ಇದುವರೆಗೆ ಸುಮಾರು 350 ಜನರಲ್ಲಿ ಕಾಣಿಸಿಕೊಂಡಿದೆ. ಎಲೂರು ಮತ್ತು ಸುತ್ತಮುತ್ತಲಿನ ಜನರಲ್ಲಿ ಹಠಾತ್ ಅನಾರೋಗ್ಯದ ಕಾರಣವನ್ನು ಅಧಿಕಾರಿಗಳಿಗೆ ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಏತನ್ಮಧ್ಯೆ, ಕೇಂದ್ರ ಸರ್ಕಾರ ತುರ್ತು ಭೇಟಿಗಾಗಿ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೊರಡಿಸಿರುವ ಕಚೇರಿ ಜ್ಞಾಪಕ ಪತ್ರದ ಪ್ರಕಾರ, ಏಮ್ಸ್ ನ ಸಹಾಯಕ ಪ್ರಾಧ್ಯಾಪಕ (ತುರ್ತು ಔಷಧ) ಡಾ.ಜಮ್ಶೆದ್ ನಾಯರ್, ಪುಣೆಯ ವೈರಾಲಜಿಸ್ಟ್ ಡಾ.ಅವಿನಾಶ್ ದೇಸೋಹ್ತಾವರ್ ಮತ್ತು ರಾಷ್ಟ್ರೀಯ ಉಪನಿರ್ದೇಶಕ ಡಾ.ಸಂಕೇತ್ ಕುಲಕರ್ಣಿ ಅವರನ್ನು ಒಳಗೊಂಡಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ತಂಡವು ಮಂಗಳವಾರ ಎಲೂರು ತಲುಪಲಿದೆ.
ಈ ತಂಡವು ಪೂರ್ವ ಗೋದಾವರಿ ಜಿಲ್ಲೆಯ ಎಲೂರು ಸುತ್ತಮುತ್ತಲಿನ ಜನರ ಹಠಾತ್ ಅನಾರೋಗ್ಯದ ಘಟನೆಯ ತನಿಖೆಗಾಗಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ತುರ್ತು ಭೇಟಿ ನೀಡಲಿದೆ. ತಂಡವು ನಾಳೆ ಬೆಳಿಗ್ಗೆ ತಲುಪಲಿದ್ದು ಮತ್ತು ಸಂಜೆಯ ವೇಳೆಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಬೇಕು ಎಂದು ಕಚೇರಿ ಜ್ಞಾಪಕ ಪತ್ರದಲ್ಲಿ ಹೇಳಲಾಗಿದೆ.

ಈ ಕಾಯಿಲೆಯು ವೈದ್ಯರನ್ನು ದಿಗ್ಭ್ರಮೆಗೊಳಿಸಿದೆ. ನಿಗೂಢ ಕಾಯಿಲೆಯಿಂದ ಬಳಲುತ್ತಿರುವವರು ಫಿಟ್ಸ್ ಮತ್ತು ವಾಕರಿಕೆಗಳಿಂದ ಬಳಲುತ್ತಿದ್ದು ನಂತರ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪುತ್ತಿದ್ದಾರೆ. ನಿಗೂಢ ಕಾಯಿಲೆ ಕಾಣಿಸಿಕೊಂಡವರಲ್ಲಿ ಹೆಚ್ಚಿನವರು 20-30 ವಯಸ್ಸಿನವರಾಗಿದ್ದರೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ 45 ಮಕ್ಕಳು ಇದ್ದಾರೆ.
ಅನಾರೋಗ್ಯದ ಕಾರಣಗಳನ್ನು ವಿಚಾರಿಸಲು ರಕ್ತ ಪರೀಕ್ಷೆಗಳು, ಸಿಟಿ (ಮೆದುಳು) ಸ್ಕ್ಯಾನ್‌ಗಳು, ಸೆರೆಬ್ರಲ್ ಸ್ಪೈನಲ್ ದ್ರವ ಪರೀಕ್ಷೆಗಳನ್ನು ನಡೆಸಲಾಗಿದೆ. ಆದಾಗ್ಯೂ, ನಿಖರ ಕಾರಣ ತಿಳಿಯಲು ಸಾಧ್ಯವಾಗಿಲ್ಲ.
ಆರಂಭದಲ್ಲಿ, ನೀರಿನ ಮಾಲಿನ್ಯವು ರೋಗದ ಕಾರಣವೆಂದು ಶಂಕಿಸಲಾಗಿತ್ತು, ಆದರೆ ಮಾದರಿ ಪರೀಕ್ಷೆಗಳು ಅದನ್ನು ತಳ್ಳಿಹಾಕಿದವು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1333440814983254022?s=19
https://twitter.com/SaakshaTv/status/1333441174862917633?s=19








