Mysuru city: ನಗರ ಸಂಚಾರಕ್ಕೆ ವೋಲ್ವೋ ಬಸ್ ಆರಂಭಿಸಿದ KSRTC
ಮೈಸೂರು ನಗರದಲ್ಲಿ ಸ್ಥಳಿಯವಾಗಿ ಸಂಚರಿಸುವ ಪ್ರಯಾಣಿಕರಿಗೆ ಹವಾ ನಿಯಂತ್ರಿತ ಹಾಗೂ ಆರಾಮದಾಯಕ ಸೇವೆ ಸಲುವಾಸಗಿ ಕೆಎಸ್ ಆರ್ ಟಿ ಸಿ ಮೈಸೂರು ನಗರದಲ್ಲಿ ವೋಲ್ವೋ ಬಸ್ ಗಳನ್ನ ಸಂಚರಿಸಲು ಮುಂದಾಗಿದೆ.
ಮೈಸೂರು ನಗರ ಕೇಂದ್ರದಿಂದ ಪಟ್ಟಣ ಕೇಂದ್ರಗಳಿಗೆ ಹಾಗೂ ಮೈಸೂರು ನಗರ ವ್ಯಾಪ್ತಿಯ ಕೆಲವು ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಸದ್ಯ ಎಕ್ಸ್‌ಪ್ರೆಸ್ ಬಸ್ ದರಕ್ಕಿಂತ ಹೆಚ್ಚುವರಿಯಾಗಿ 5 ರಿಂದ 10 ರೂ. ನೀಡಿದರೆ ಹವಾನಿಯಂತ್ರಿತ ಸಿಟಿ ವೋಲ್ವೊ ಬಸ್ ಸೇವೆ ಪಡೆಯಬಹುದಾಗಿದೆ.
ಮೈಸೂರು-ಚಾಮುಂಡಿ ಬೆಟ್ಟ, ಜೆಪಿ ನಗರ, ಇನ್ಫೋಸಿಸ್, ಎಲ್ ಆಂಡ್ ಟಿ ಮಾರ್ಗವಾಗಿ ಸಂಚರಿಸುವ ಬಸ್ ಸೇವೆಗಳಲ್ಲಿ ವೋಲ್ವೋ ಬಸ್ ಸೇವೆಗಳನ್ನ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಮೈಸೂರು ವಿಭಾಗದಲ್ಲಿ ಒಟ್ಟು 32 ವೋಲ್ವೊ ಬಸ್‌ಗಳಿದ್ದು, ಅದರಲ್ಲಿಚಾಮುಂಡಿಬೆಟ್ಟಕ್ಕೆ 6, ಇನ್ಫೋಸಿಸ್ ಹಾಗೂ ಎಲ್ ಆಂಡ್ ಟಿ ಮಾರ್ಗಕ್ಕೆ 4, ಜೆಪಿ ನಗರ-2, ನಂಜನಗೂಡು-4, ಮಳವಳ್ಳಿ-2, ಹುಣಸೂರು-ಪಿರಿಯಾಪಟ್ಟಣ-ಕುಶಾಲನಗರ ಮಾರ್ಗಕ್ಕೆ 2, ಕೆ.ಆರ್. ನಗರ-2 ಸೇರಿದಂತೆ ಒಟ್ಟು 22 ವೋಲ್ವೊ ಬಸ್ ಸೇವೆ ನೀಡಲಾಗುತ್ತಿದೆ. ಇನ್ನುಳಿದ 10 ಬಸ್ ಸೇವೆಯನ್ನು ದಸರಾ ಸಂದರ್ಭದಲ್ಲಿ ‘ನಗರ ದರ್ಶಿನಿ’ ಮಾದರಿಯಲ್ಲಿ ಬಳಸಿಕೊಳ್ಳಲು ಮೈಸೂರು ಕೆ ಎಸ್ ಆರ್ ಟಿ ಸಿ ವಿಭಾಗ ಮುಂದಾಗಿದೆ.