Mysuru | ವಿದ್ಯುತ್ ತಂತಿ ತುಳಿದು ಮೂವರು ಸಾವು
ಮೈಸೂರು : ವಿದ್ಯುತ್ ತಂತಿ ತುಳಿದು ಮೂವರು ಮೃತಪಟ್ಟಿರುವ ಘಟನೆ ಟಿ ನರಸೀಪುರದ ನಿಲಸೋಗೆ ಗ್ರಾಮದಲ್ಲಿ ನಡೆದಿದೆ.
32 ವರ್ಷದ ಹರೀಶ್, 60 ವರ್ಷದ ರಾಚೇಗೌಡ, 38 ವರ್ಷದ ಮಹದೇವಸ್ವಾಮಿ ಮೃತ ದುರ್ದೈವಿಗಳಾಗಿದ್ದಾರೆ.

ಇವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








