ಆಸ್ಪತ್ರೆಯಿಂದ ಬರುತ್ತಿದ್ದಂತೆ `ಬಂಡೆಗೆ ಸಿಎಂ ಆಪ್ತ ಡಿಚ್ಚಿ’
ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ರೆಸ್ಟ್ ಗಾಗಿ ಒಂದು ತಿಂಗಳು ಆಸ್ಪತ್ರೆಗೆ ಸೇರಿಕೊಳ್ಳಲಿ ಎಂದು ಸಿಎಂ ಆಪ್ತ ಎನ್ ಆರ್ ಸಂತೋಷ್ ಅವರು ಕನಕಪುರ ಬಂಡೆಗೆ ಡಿಚ್ಚಿ ಕೊಟ್ಟಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಎನ್ ಆರ್ ಸಂತೋಷ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿ, ಅವರು ಚುನಾವಣೆಯಲ್ಲಿ ಸೋತಿದ್ದಕ್ಕೆ ಈ ರೀತಿಯ ಹೇಳಿಕೆಗಳನ್ನು ಕೊಡ್ತಾ ಇದ್ದಾರೆ. ಕಂಪ್ಲಿ ಪಟ್ಟಣ ಬಂದ್ ವೇಳೆ ಘರ್ಷಣೆ: ಕೈಕೈ ಮಿಲಾಯಿಸಿದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು
ಇದು ಮೊದಲನೇನಲ್ಲ. ತನಿಖಾ ಸಂಸ್ಥೆ ದಾಳಿ ಮಾಡಿದಾಗಲೂ ಡಿಕೆಶಿ ಇದೇ ರೀತಿ ಆರೋಪ ಮಾಡುತ್ತಾರೆ.
ಅವರು ರೆಸ್ಟ್ ಗಾಗಿ ಒಂದು ತಿಂಗಳು ಆಸ್ಪತ್ರೆಗೆ ಸೇರಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ಮೂರು ದಿನಗಳ ಹಿಂದೆ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಊಟ ಸೇವಿಸಿದ ಬಳಿಕ ಅಜೀರ್ಣವಾಗಿತ್ತು. ಹೀಗಾಗಿ ನಾನು ತೆಗೆದುಕೊಳ್ಳಬೇಕಾದ ಮಾತ್ರೆಯನ್ನು ಬಿಟ್ಟು ನಿದ್ದೆ ಮಾತ್ರೆ ತೆಗೆದುಕೊಂಡಿದ್ದೆ. `ಹಳ್ಳಿ ಫೈಟ್’ಗೆ ಮುಹೂರ್ತ ಫಿಕ್ಸ್: ಡಿ.22, 27ಕ್ಕೆ ಎರಡು ಹಂತದಲ್ಲಿ ಚುನಾವಣೆ
ಇದರಿಂದಾಗಿ ನನ್ನ ಆರೋಗ್ಯ ಹಾಳಾಗಿದ್ದನ್ನು ಕಂಡು ಪತ್ನಿ ಗಾಬರಿ ಬಿದ್ದು ಆಸ್ಪತ್ರೆಗೆ ಸೇರಿಸಿದ್ದಾಳೆ ಅಷ್ಟೇ. ಬೇರೆ ಏನು ಇಲ್ಲ ಎಂದು ಆತ್ಮಹತ್ಯೆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel