ಬೇರೆ ಎಲ್ಲಾ ನಟಿಯರಿಗಿಂತ ಸಮಂತಾ ಜೊತೆಗೆ ನನ್ನ ಕೆಮಿಸ್ಟ್ರಿ ಚನಾಗಿತ್ತು : ನಾಗ ಚೈತನ್ಯ
ಸಮಂತಾ ಹಾಗೂ ನಾಗಚೈತನ್ಯ ಇಬ್ರೂ ಕೂಡ ಡಿವೋರ್ಸ್ ಪಡೆದು ಸುಮಾರು ಮೂರು ತಿಂಗಳೇ ಕಳೆದಿದೆ.. ಇಬ್ರೂ ಕೂಡ ಪಾಸ್ಟ್ ಮರೆತು ಬದುಕಲು ಪ್ರಯತ್ನಿಸುತ್ತಿದ್ದು , ವೃತ್ತಿ ಜೀವನದಲ್ಲಿ ಇಬ್ರೂ ಬ್ಯುಸಿಯಿದ್ದಾರೆ… ನಾಗಚೈತನ್ಯ ಬಂಗರಾಜು ಸಿನಿಮಾದ ಪ್ರಮೋಷನ್ ಮಾಡ್ತಿದ್ರೆ , ಸಮಂತಾ ಹಾಲಿವುಡ್ ಸಿನಿಮಾ ¥ಒಪ್ಪಿದ್ದು , ಬಾಲಿವುಡ್ ನಲ್ಲಿ ಸಿನಿಮಾ ಮಾಡೋದಕ್ಕೆ ತಯಾರಾಗಿದ್ದು , ಈಗಷ್ಟೇ ಪುಷ್ಪ ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದು , ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ರೆಡಿಯಾಗಿದ್ದಾರೆ…
ಈ ಇಬ್ಬರೂ ಕೂಡ ಡಿವೋರ್ಸ್ ಬಳಿಕ , ಸಾಕಷ್ಟು , ನಿಂದನೆ , ಟೀಕೆ , ಟ್ರೋಲ್ ಗಳನ್ನ ಎದುರಿಸಿದರೂ.. ಮಾನಸಿಕವಾಗಿ ಕುಗ್ಗಿದ್ರೂ ಮತತ್ತೆ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ… ಈ ಬಗ್ಗೆ ಸ್ಯಾಮ್ ಒಮ್ಮೆ ಮಾತನಾಡಿದ್ದರೂ ಕೂಡ ನಾಗಗಚೈತನ್ಯು ಈವರೆಗೂ ಈ ಬಗ್ಗೆ , ಸ್ಯಾಮ್ ಜೊತೆಗೆ ಡಿವೋರ್ಸ್ ಬಗ್ಗೆ ಆಗಲಿ ತುಟಿ ಬಿಚ್ಚಿರಲಿಲ್ಲ..
ಆದ್ರೆ ಇತ್ತೀಚಗೆ ಸಂದರ್ಶನವೊಂದ್ರಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದ ಅವರು ವಯಕ್ತಿಕ ಖುಷಿ ಅಂತ ಬಂದಾಗ ಡಿವೋರ್ಸ್ ಒಳ್ಳೆಯ ನಿರ್ಧಾರ. ಆಕೆ ( ಸಮಂತಾ ) ಖುಷಿಯಾಗಿದ್ರೆ ನನಗೂ ಖುಷಿ ಎಂದಿದ್ದರು.. ಈ ಮೂಲಕ ಈಗಲೂ ತಮ್ಮ ಮನಸ್ಸಿನ ಒಂದು ಭಾಗದಲ್ಲಿ ಸ್ಯಾಮ್ ಸ್ತೀತರಾಗಿದ್ದಾರೆ ಎನ್ನುವುದನ್ನ , ಅವರಿಂದ ದೂರಾದ ನೋವನ್ನ ಪರೋಕ್ಷವಾಗಿ ವ್ಯಕ್ತಪಡಿಸಿದ್ದರು..
ಅಷ್ಟೇ ಅಲ್ಲದೇ ಖಾಸಗಿ ಸಂದರ್ಶನದಲಿ ್ಲ ಇಲ್ಲಿವರೇಗೂ ನಿಮ್ಮೊಂದಿಗೆ ನಟಿಸಿದ ನಟಿಯರಲ್ಲಿ ನೀವು ಆನ್‌ಸ್ಕ್ರೀನ್ ಯಾವ ನಟಿಯೊಂದಿಗೆ ಉತ್ತಮ ಕೆಮಿಸ್ಟ್ರಿ ಹೊಂದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಚೈತನ್ಯ ಇದಕ್ಕೆ ತಕ್ಷಣವೇ ಉತ್ತರ ನೀಡಿರುವ ನಾಗಚೈತನ್ಯ ಸಮಂತಾ ಎಂದು ಉತ್ತರ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಹೌದು ಇಲ್ಲಿವರೆಗೂ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ನಾಲ್ಕು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದು, ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೂ ಹಿಡಿಸಿತ್ತು. ಸಿನಿಮಾದ ಮೂಲಕವೇ ಪ್ರೀತಿ ಮಾಡಲು ಆರಂಭಿಸಿದ್ದ ಈ ಜೋಡಿ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.
ಆದ್ರೆ ಮದುವೆಯಾದ ನಾಲ್ಕು ವರ್ಷಗಳ ನಂತರ ಕೆಲವು ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಡಿವೋರ್ಸ್ ಪಡೆದಿತ್ತು.. ಆದ್ರೆ ಈಗಲೂ ಅವರು ಒಂದಾಗಲಿ ಎಂದು ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ… ಅವರಿಗೆ ನಾಗ ಚೈತನ್ಯ ಸ್‍ಯುಆಮ್ ಬಗ್ಗೆ ಹೇಳಿಕೆ ನೀಡಿದ್ದು ಖುಷಿ ತಂದಿದೆ..








