ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನಾಳೆ ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗರ ಪಂಚಮಿ ಈ ವಿಧಾನ ಮಾಡಿ

Mahesh M Dhandu by Mahesh M Dhandu
August 1, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ನಾಳೆ ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗರ ಪಂಚಮಿ ಈ ವಿಧಾನ ಮಾಡಿ.

ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . 02/08/2022 ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ.
ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಂದರ್ಥದಲ್ಲಿ ಪ್ರಕೃತಿಯ ಆರಾಧನೆ.
ನಾಗಾರಾಧನೆ ಇದೊಂದು ಪ್ರಾಚೀನ ಆರಾಧನೆ . ವೇದದ ಸೊಲ್ಲುಗಳು ನಾಗಪೂಜೆಯ ಪ್ರಾಚೀನತೆಯನ್ನು ತಿಳಿಯ ಪಡಿಸುತ್ತವೆ . ನಾಗ ದೇವರು ಅಗಣಿತ ಮಹಿಮೆಯ ಶಕ್ತಿಯೆಂದು ಸರ್ಪ ಸೂಕ್ತಗಳ ವರ್ಣನೆಯಿದೆ.
‘ “ಅನಂತಶ್ಚಾಸ್ಮಿ ನಾಗಾನಾಂ ” – ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿದ ಈ ಮಾತು ಸದಾ ಸ್ಮರಣೀಯವಾದುದು . ನಮ್ಮ ಭಾರತದ ಹರಪ್ಪ – ಮೊಹೆಂಜೊದಾರೋಗಳಲ್ಲಿ ಲಭ್ಯವಾದ ನಾಗ ಮುದ್ರೆಗಳು , ಗೋಕರ್ಣದ ನಾಗ ಬಂಧ ಚಿತ್ರ , ಬನವಾಸಿಯಲ್ಲಿರುವ ಕ್ರಿ . ಶ . ಮೂರನೆಯ ಶತಮಾನದ ನಾಗ ಪ್ರತೀಕಗಳು , ಶಿಲಾ ಶಾಸನಗಳಲ್ಲಿ ಕಾಣ ಸಿಗುವ ಹಾವಿನ ಚಿತ್ರಗಳು ಭಾರತದಲ್ಲಿ ಅನಾದಿಯಿಂದಲೂ ನಾಗ ದೇವರ ಬಗ್ಗೆ ಭಯ ಭಕ್ತಿಯಿತ್ತು ಎಂಬುದನ್ನು ಸಾರುತ್ತಲಿವೆ . ಪ್ರಾಚೀನ ಕಾಲದ ಕಾಷ್ಠ ಶಿಲ್ಪಗಳಲ್ಲಿರುವ ನಾಗ ಬಂಧದ ಸುಂದರ ದೃಶ್ಯ ಮನ ಮೋಹಕ . ದೇವರ ಪ್ರಭಾವಳಿ , ಆರತಿ ತಟ್ಟೆ , ಉದ್ಧರಣೆ ( ಸೌಟು ) , ಗರ್ಭ ಗೃಹದ ಮಾಡಿನ ಆಧಾರದ ಲೋಹದ ಆಕೃತಿಗಳು, ದೇವರ ವಿಗ್ರಹದ ಶಿರೋಭಾಗ ಇವೆಲ್ಲವುಗಳಲ್ಲಿ ನಾಗ ಸಂಕೇತಗಳನ್ನು ಗುರುತಿಸಬಹುದಾಗಿದೆ .
ವಿಧಿಯ ಆಟದಂತೆ ನಾಗಗಳು ಭೂಮಿಯಿಂದ ತಮ್ಮ ವಾಸ್ತವ್ಯದ ಸ್ಥಾನ ಬದಲಾಯಿಸಿಕೊಂಡು ಅನುಗ್ರಹ ಪಡೆದ ಅರ್ಥಾತ್ ಬದುಕು ರೂಪಿಸಿಕೊಂಡ ದಿನವೇ ಪಂಚಮಿ . ಹೀಗಾಗಿ ಪ್ರತಿ ತಿಂಗಳ ಶುಕ್ಲ ಪಂಚಮಿಗಳೂ ನಾಗರ ಪೂಜೆಗೆ ಹೇಳಿಸಿದ ತಿಥಿಗಳು , ಅದರಲ್ಲಿಯೂ ನಾಗರ ಪಂಚಮಿ ( ಶ್ರಾವಣ ಶುಕ್ಲ ಪಂಚಮಿ ) ಹಾಗೂ ಮಾರ್ಗಶಿರ ಶುಕ್ಲ ಪಂಚಮಿ ನಾಗಾರಾಧನೆಗೆ ಪುಣ್ಯಪ್ರದವೆಂಬ ಹೇಳಿಕೆ ಸ್ಕಾಂದ ಪುರಾಣದಲ್ಲಿದೆ .

Related posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

April 2, 2026
ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

April 2, 2026
nagara panchami festival information in kannada  saaksha tv
nagara panchami festival information in kannada saaksha tv

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ವಾಡಿಕೆಯಂತೆ ಶ್ರಾವಣ ಶುಕ್ಲ ಪಂಚಮಿಯೇ ನಾಗರ ಪಂಚಮಿಯೆಂದು ಖ್ಯಾತಿ ಪ್ರಖ್ಯಾತಿಗಳಿಸಿದೆ . ನಾಗದೇವರಿಗೆ ತನು ಹಾಕುವುದು ( ನಾಗ ದೇವರಿಗೆ ತಂಪೆರೆಯುವುದು ) ಈ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮ. ಪಂಚಾಮೃತಾಭಿಷೇಕ , ಶೀಯಾಳದ ಅಭಿಷೇಕ; ಹಾಲಿನ ಅಭಿಷೇಕ ನಾಗ ದೇವರಿಗೆ ವಿಶೇಷ ಪ್ರೀತಿಯನ್ನುಂಟು ಮಾಡುವುದು. ಅರಸಿನ ಹುಡಿ ನಾಗದೇವರಿಗೆ ಪ್ರೀತಿ ಕರ.
ಅರಶಿನ ಬಣ್ಣದ- ಸುಗಂಧ ಭರಿತ ಕೇದಗೆ , ಹಿಂಗಾರ ( ಪೂಗ ಪುಷ್ಪ ) ಸಂಪಿಗೆ ಇಂತಹ ಹೂಗಳು ಪೂಜಾರ್ಹ , ಅರಶಿನ ಎಲೆಯಲ್ಲಿ ಮಾಡಿದ ಭಕ್ಷವನ್ನು ತಯಾರಿಸಿ ಸ್ವೀಕರಿಸುವುದೂ ಈ ದಿನದ ವಿಶೇಷ . ಅಂತೂ ಮೂಲ ನಾಗಬನದಲ್ಲಿ ಅಥವಾ ಯಥಾ ಸಾಧ್ಯ ನಾಗ ಸನ್ನಿಧಿಯಲ್ಲಿ ಫಲ – ಪುಷ್ಪ – ಅಭಿಷೇಕ ದ್ರವ್ಯ – ಲಾವಂಚ ಧೂಪ ಇತ್ಯಾದಿ ಯಥಾ ಲಭ್ಯ ವಸ್ತುಗಳನ್ನು ಅರ್ಪಿಸಿ , ಪ್ರಾರ್ಥನಾ ಪೂರ್ವಕ ಪ್ರಸಾದ ಸ್ವೀಕರಿಸಿ , ಕೃತ ಕೃತ್ಯರಾಗುವುದೇ ಈ ದಿನದ ಧನ್ಯತೆಯ ಕಾರ್ಯಕ್ರಮ .ನಾಗಾಂತರ್ಗತ ಸಂಕರ್ಷಣ ರೂಪಿ ಪರಮಾತ್ಮನ ಪ್ರಸನ್ನತೆಯು ಸತ್ ಸಂತಾನವನ್ನು; ದೈವಿಕ ಸಂಪತ್ತನ್ನು ನೀಡುವುದರಲ್ಲಿ ಅನುಮಾನವಿಲ್ಲ.

ನಾವು ವಾಸವಾಗಿರುವ ಈ ಭೂಮಿಯನ್ನು ಹೊತ್ತ ದಿವ್ಯ ಶಕ್ತಿಯೇ ಆದಿ ಶೇಷ . ಹೀಗಾಗಿ ಈ ದಿನ ಮಣ್ಣನ್ನು ಅಗೆಯುವ , ಕಡಿಯುವ ಕೆಲಸ ವರ್ಜ್ಯ. ಸಾಸಿವೆ , ಪಡುವಲ ಕಾಯಿ ಈ ದಿನ ಬಳಸುವ ರೂಢಿಯಿಲ್ಲ . ಶ್ಯಾವಿಗೆ ಮಾಡುವಂತಿಲ್ಲ . ವಿಶೇಷ ಭಕ್ಷಗಳಾದ ಮೋದಕ , ಕಡುಬು , ತುಂಬಿಟ್ಟು ಮುಂತಾದವುಗಳನ್ನು ಹಬೆಯಲ್ಲಿಯೇ ಬೇಯಿಸುತ್ತಾರೆ. . ದೋಸೆ . ಹೊಯ್ಯುವ , ಒಗ್ಗರಣೆ ಹಾಕುವ ಹಾಗೂ ಕರಿಯುವ ಕ್ರಿಯೆಗಳಿಗೂ ಈ ದಿನ ವಿರಾಮ ನೀಡುತ್ತಾರೆ . ಇವೆಲ್ಲ ಜನಮನದ ನಂಬುಗೆಗಳು . ನಾವು ನಾಗ ದೇವರ ಕುರಿತು ಮೊದಲು ಅರಿತುಕೊಳ್ಳಬೇಕು . ಆಗ ಭಕ್ತಿ ಪ್ರೀತಿ ಹೆಚ್ಚಾಗುತ್ತದೆ . ಈ ತಿಳಿದು ಮಾಡುವ ಪೂಜೆಯಿಂದ ಆರೋಗ್ಯ , ಸತ್ಸಂತಾನ , ಸೌಭಾಗ್ಯ ಲಭಿಸುತ್ತದೆ . ನಾಗಬನ , ನಾಗ ಬೀದಿ , ಹುತ್ತ , ನಾಗ ಪರಿಸರ ಭಕ್ತಿ ಪ್ರಧಾನವಾದ ಈ ನಂಬುಗೆಯಿಂದಲೂ ನಮ್ಮ ಪರಿಸರ ಭಾಗಶಃ ಶುದ್ಧವಾಗಿ ಉಳಿದು ಬರಲು ಸಹಾಯಕವಾಗಿದೆ . ಲೌಕಿಕವಾಗಿಯೂ ಇದು ನಾವು ಪಡೆದು ಬಂದ ಭಾಗ್ಯವೆನ್ನಬಹುದು . ವರ್ಷಕ್ಕೊಮ್ಮೆಯಾದರೂ ನಾಗಾರಾಧನೆಯ ನೆಪದಿಂದ ಕುಟುಂಬೀಯರು , ಊರವರು ಸಾಮೂಹಿಕವಾಗಿ ನಾಗಬನಗಳಲ್ಲಿ ನಾಗ ಕ್ಷೇತ್ರಗಳಲ್ಲಿ ಒಟ್ಟುಗೂಡಿ , ಸತ್ ಚಿಂತನೆಗಳಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಶ್ರೇಯಸ್ಕರ . ಮುಖ್ಯವಾಗಿ ಮುಂದಿನ ಜನಾಂಗ ಈ ಪೂಜಾ ಸಂಸ್ಕೃತಿಯಲ್ಲಿ ಪಾಲ್ಗೊಳ್ಳಬೇಕು . ಪರಿಸರ ಪ್ರಜ್ಞೆ ಅವರಲ್ಲಿ ಬೆಳೆಯಬೇಕು . ಜ್ಞಾನ , ಭಕ್ತಿ , ವೈರಾಗ್ಯ ಅವರಲ್ಲಿಯೂ ಅಂಕುರಿಸಬೇಕು . ಇದರಿಂದಲೇ ನಮ್ಮ ಸಂಸ್ಕೃತಿಯ ಸೌರಭ ಉಳಿಯಲು ಸಾಧ್ಯ . ಅನಂತ ಫಲದಾಯಕನೆಂಬ ಕೀರ್ತಿಯ ಅನಂತನೆಂಬ ನಾಮದ ಪರಮಾತ್ಮನು ನಮ್ಮ ಮನದಂತರಂಗದಾಳದಲ್ಲಿ ವಾಸಿಸಲಿಕ್ಕೂ ಇದೊಂದು ಸದವಕಾಶ .

nagara panchami festival information in kannada  saaksha tv
nagara panchami festival information in kannada saaksha tv

ನಾಗನಿಗೇಕೀ ಮಹತ್ವ?
ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ನಿಧಿ ಸಂರಕ್ಷಕನು ಹೌದು….
ಸರ್ಪಗಳಿಗೆ ಸರಿಸೃಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.

ಸರ್ಪಗಳ ಜನ್ಮ

, ಸರ್ಪ ಸಂಕುಲ
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ…. ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ಪಂಚಮಿ, ಆಶ್ಲೇಷ ನಕ್ಷತ್ರ, ಷಷ್ಠಿಯದಿನ ನಾಗದೇವರ ಸಂಬಂಧಿ ನಕ್ಷತ್ರಗಳು
ಇಂತಹ ಪ್ರಶಸ್ತ ದಿನಗಳಲ್ಲಿ ನಾಗಾರಾಧನೆಯು ಉತ್ತಮ
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷ ,ಸರಿಸೃಪನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಾರೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗಾರಾಧನೆಯನ್ನು ಸರ್ಪ ಸಂಸ್ಕಾರವನ್ನು ಮಾಡಲಾಗುತ್ತದೆ.

ಯಾರು ಯಾವ ಸಂದರ್ಭದಲ್ಲಿ ಯಾಕೆ ಸರ್ಪ ಸಂಸ್ಕಾರ ಮಾಡಬೇಕು

ಕೆಲ ಜ್ಯೋತಿಷ್ಯರು ಜಾತಕ ನೋಡಿ ಸಾಮಾನ್ಯವಾಗಿ ದುಸ್ಥಾನ ಗಳಲ್ಲಿ (೬,೮,೧೨)ರಲ್ಲಿ ರಾಹು ಇದ್ದಾಗ ನಿಮಗೆ ಸರ್ಪ ದೋಷವಿದೆ.ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುವುದು ವಾಡಿಕೆ ಯಾಗಿದೆ. ಇಂತಹ ಸಲಹೆಗಳು ಬರುತ್ತದೆ. ಆದರೆ ಒಂದು ವೇಳೆ ಸರ್ಪ ಸಾಯದೇ ಇದ್ದಲ್ಲಿ ಸರ್ಪ ಸಂಸ್ಕಾರ ಮಾಡುವುದು ಉಚಿತವೇ ಎಂಬುದು ಪ್ರಶ್ನೆಯಾಗುತ್ತದೆ. ಸಾಯದ ಜಂತುವಿಗೆ ಮರಣೋತ್ತರ ಕ್ರಿಯೆ ಮಾಡಿ ಅದನ್ನು ಎಲ್ಲಿಗೆ ಕಳುಹಿಸುತ್ತಾರೆ.? ಒಬ್ಬ ವ್ಯಕ್ತಿ ಸಾಯದೆ ಇದ್ದಾಗ ಉತ್ತರ ಕ್ರಿಯೆ ಮಾಡು ವುದು ಸರಿಯೇ?
ಯಾವ ಸಂದರ್ಭದಲ್ಲಿ ಸರ್ಪ ಸಂಸ್ಕಾರ ಮಾಡ ಬೇಕು?
1.ಸರ್ಪನ ಮರಣ ನೋಡಿರಬೇಕು ಮತ್ತು ಅದಕ್ಕೆ ಸಂಸ್ಕಾರ ಆಗದೆ ಇರಬೇಕು.
2. ಸ್ಥಳ ಭಾದಿತ ಸರ್ಪ ದೋಷಗಳು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದರೆ ಆಗ ಸರ್ಪ ಸಂಸ್ಕಾರ ಬೇಕು.
3. ಹೊಸದಾಗಿ ನಾಗಬನ ಮಾಡುವುದಿದ್ದರೆ ಆಗ ಸರ್ಪ ಸಂಸ್ಕಾರದ ಮೂಲಕ ನಾಗ ಶಿಲಾ ಪ್ರತಿಷ್ಟೆಯಾಗಬೇಕು. ಭೂಮಿ ಎಂದ ಮೇಲೆ ಜೀವಿಗಳು ಪ್ರತೀ ಇಂಚು ಇಂಚಿಗೂ ಸತ್ತಿರುತ್ತದೆ.ಭೂಮಿಯು ಸ್ಮಶಾನವೆ ಆಗಿರುತ್ತದೆ. ಅದಕ್ಕಾಗಿ ಮರ್ತ್ಯಲೋಕ ಎಂದು ಕರೆದರು.ಇಂತಹ ಉದ್ಧಿಶ್ಯದಲ್ಲಿ ಸರ್ಪಸಂಸ್ಕಾರ ಮಾಡಿ ಭೂಮಿಯಲ್ಲಿ ನಿಧಿಸ್ಥಾಪಿಸಿ ನಾಗ ಪ್ರತಿಷ್ಟೆ ಮಾಡಬಹುದು.
4. ವಾಹನಗಳ ಗಾಲಿಗಳಿಗೆ ನಾಗನು ಬಿದ್ದು ಸತ್ತಿದ್ದು ಕಂಡರೆ, ಯಾವುದೋ ನವಿಲೋ, ಗಿಡುಗನೋ, ಮುಂಗುಸಿಯೋ ಅಥವಾ ಇನ್ಯಾವ ಪ್ರಾಣಿ ಪಕ್ಷಿಗಳಿಂದ ನಾಗರ ಹಾವು ಸತ್ತಿದ್ದು ಕಂಡರೆ ಸಂಸ್ಕಾರ ಮಾಡಲೇ ಬೇಕು.
5.ನಾಗವಂಶದ ಸರಿಸೃಪಾದಿ ಅಂದರೆ ಇತರ ವಿಷಯುಕ್ತ ಹಾವುಗಳು ನಮ್ಮ ಕೈಯಲ್ಲಿ ಕೊಲ್ಲಲ್ಪಟ್ಟಿದ್ದರೆ ಅದು ನಾಗದೋಷವಾಗುತ್ತದೆ.ಆಗ ಇದರ ಉದ್ದಿಶ್ಯವಾಗಿ ಸಂಸ್ಕಾರ ಮಾಡಬಹುದು.
6. ನಾಗ ವನಗಳು ನಮ್ಮಿಂದಾಗಿ ಸುಟ್ಟು ಹೋಗಿದ್ದರೆ, ಧ್ವಂಸವಾಗಿದ್ದರೆ ಇಲ್ಲಿ ಅಗೋಚರವಾಗಿ ಸರ್ಪ ಸಂತತಿ ನಾಶವಾ ಗಿರಬಹುದು.ಇಂತಹ ವಿಚಾರವಿದ್ದಾಗ ಸಂಸ್ಕಾರ ಮಾಡಬೇಕು.

nagara panchami festival information in kannada  saaksha tv
nagara panchami festival information in kannada saaksha tv

 ನಾಗ ದೇವರನ್ನು ಸ್ತೋತ್ರಗಳ ಮೂಲಕ ಆರಾಧನೆ ಮಾಡಿದರೆ ನಾಗಗಳಿಂದ ಅನುಗ್ರಹವನ್ನು ಪಡೆಯಬಹುದು

‘ ಓಂ ನಮೋ ಭಗವತೇ ಕಾಮರೂಪಿಣಿ ಮಹಾಬಲಾಯ ನಾಗಾಧಿಪತಯೇ ಅನಂತಾಯ ಸ್ವಾಹಾ’

ನಮೋ ಅಸ್ತು ಸರ್ಪೇಭ್ಯೋ ಯೇ ಕೇ ಚ ಪೃಥಿವೀಮನು ।
ಯೇ ಅಂತರಿಕ್ಷೇ ಯೇ ದಿವಿ ತೇಭ್ಯಃ ಸರ್ಪೇಭ್ಯೋ ನಮಃ ॥

ಭೂಮಂಡಲದಲ್ಲಿರುವ ಸರ್ಪಗಳಿಗೆ , ವಾಯುಮಂಡಲದಲ್ಲಿರುವ ಸರ್ಪಗಳಿಗೆ , ನಭೋಮಂಡಲದಲ್ಲಿರುವ ಸರ್ಪಗಳಿಗೆ ನಮಸ್ಕಾರ..

ಯೇSದೋರೋಚನೇ ದಿವೋ ಯೇ ವಾ ಸೂರ್ಯಸ್ಯ ರಶ್ಮಿಷು ।
ಯೇಷಾಮಪ್ಸು ಸದಸ್ಕೃತಂ ತೇಭ್ಯಃ ಸರ್ಪೇಭ್ಯೋ ನಮಃ ॥

ಆಕಾಶದ ಬೆಳಕಿನಲ್ಲಿ , ಸೂರ್ಯನ ಪ್ರಕಾಶದಲ್ಲಿ ಹಾಗೂ ನೀರಿನಲ್ಲಿರುವ ಸಮಸ್ತ ಸರ್ಪಗಣಗಳಿಗೆ ನಮಸ್ಕಾರ.

ಯಾ ಇಷವೋ ಯಾತುಧಾನಾನಾಂ ಯೇ ವಾ ವನಸ್ಪತೀರನು ।
ಯೇ ವಾ ವಟೇಷು ಶೇರತೇ ತೇಭ್ಯಃ ಸರ್ಪೇಭ್ಯಃ ನಮಃ ॥

ಆಯುಧವನ್ನಾಗಿ ಉಪಯೋಗಿಸುವ ಸರ್ಪಗಳಿಗೆ (ಹಿಂದೆ ಯುದ್ಧಗಳಲ್ಲಿ ಸರ್ಪಾಸ್ತ್ರವನ್ನು ಉಪಯೋಗಿಸಲಾಗುತ್ತಿತ್ತು)
ಹೂ ಬಿಡದೇ ಕೇವಲ ಹಣ್ಣನ್ನಷ್ಟೇ ನೀಡುವ ವೃಕ್ಷಗಳಲ್ಲಿ ವಾಸಿಸುತ್ತಿರುವ ಸರ್ಪಗಳಿಗೆ ,
ಬಿಲಗಳಲ್ಲಿ ಮಲಗಿರುವ ಸರ್ಪಗಳಿಗೆ ನಮಸ್ಕರಿಸೋಣ..

ಸರ್ಪೋ ಅನಂತೋ ತಥಾ ಶೇಷೋ ಕಪಿಲೋ ನಾಗ ಏವಚ|
ಕಳಿಂಗ ಶಂಖ ಪಾಲಾಶ್ಚ ಭೂಧರಾಶ್ಚ ಪ್ರಕೀರ್ತಿತಾಃ||

ಅಷ್ಟಕುಲ ನಾಗ ಸ್ತೋತ್ರ
(ಸಂತಾನ ಪ್ರಾಪ್ತಿಗಾಗಿ)

ಓಂ ಬ್ರಹ್ಮಲೋಕೇ ಚ ಯೇ ಸರ್ಪಾಃ ಶೇಷನಾಗ ಪುರೋಗಮಾಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಓಂ ವಿಷ್ಣುಲೋಕೇ ಚ ಯೇ ಸರ್ಪಾಃ ವಾಸುಕೀ ಪ್ರಮುಖಾಸ್ತಥಾ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಓಂ ರುದ್ರಲೋಕೇ ಚ ಯೇ ಸರ್ಪಾಃ ತಕ್ಷಕ ಪ್ರಮುಖಾಸ್ತಥಾ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಕಾಪೀಲೇಯಾಶ್ಚ ಯೇ ಸರ್ಪಾಃ ಮಾತೃ ಭಕ್ತಿ ಪರಾಯಣಾಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಖಾಂಡವಸ್ಯ ಚ ದಾಹೇನ ಸ್ವರ್ಗಂಯೇಚ ಸಮಾಗತಾಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಸರ್ಪ ಸತ್ರೇಚ ಯೇ ಸರ್ಪಾಃ ಅಸ್ತಿಕೇನಚ ರಕ್ಷಿತಾಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಯಮಲೋಕೇಚ ಯೇ ಸರ್ಪಾಃ ವೆತರಣ್ಯಾಂ ಸಮಾಗತಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಸಮುದ್ರೇಚೈವ ಯೇ ಸರ್ಪಾಃ ಯೇ ಸರ್ಪಾಃ ಜಲವಾಸಿನಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಮಾನವೇಚೈವ ಯೇ ಸರ್ಪಾಃ ಕರ್ಕೋಟ ಪ್ರಮುಖಾಶ್ಚಯೇ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಯೇ ಸರ್ಪಾಃ ಪರ್ವತಾಗ್ರೇಚ ಯೇ ಚ ಸಂಧಿಶು ಸಂಸ್ಥಿತಾಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಗ್ರಾಮೇ ವಾಯದಿವಾರಣ್ಯೇ ಯೇ ಸರ್ಪಾ ಪ್ರಚರಂತಿಃ|
ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ||
ಯಸ್ಯವಾಸಃ ಕುರುಕ್ಷೇತ್ರೇ ಖಾಣುವೇಚಾ ಭವತ್ಪುರಾ|
ಕರವಾಣಿ ಸದಾ ಚಾಹಂ ಸರ್ಪೇಭ್ಯೋ ವೈ ನಮೋ ನಮಃ||
ತಕ್ಷಕಶ್ಚಾಸ್ವಕರ್ಣಶ್ಚ ನಿತ್ಯಂ ಸಹಚರಾ ವುಭೌ|
ಕರವಾಣಿ ಸದಾ ಚಾಹಂ ಸರ್ಪೇಭ್ಯೋ ವೈ ನಮೋ ನಮಃ||

ಸರ್ಪರಾಜ ಅಷ್ಟೋತ್ತರ..
ಓಂ ಅನಂತಾಯ ನಮಃ
ಓಂ ವಾಸುದೇವಾಯ ನಮಃ
ಓಂ ತಕ್ಷಕಾಯ ನಮಃ
ಓಂ ವಿಶ್ವತೋಮುಖಾಯ ನಮಃ
ಓಂ ಕರ್ಕೋಟಕಾಯ ನಮಃ
ಓಂ ಮಹಾಪದ್ಮಾಯ ನಮಃ
ಓಂ ಪದ್ಮಾಯ ನಮಃ
ಓಂ ಶಂಖಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಧೃತರಾಷ್ಟ್ರಾಯ ನಮಃ ||೧೦||
ಓಂ ಶಂಖಪಾಲಾಯ ನಮಃ
ಓಂ ಕುಳಿಕಾಯ ನಮಃ
ಓಂ ಸರ್ಪನಾಥಾಯ ನಮಃ
ಓಂ ಇಷ್ಠದಾಯಿನೇ ನಮಃ
ಓಂ ನಾಗರಾಜಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷಾಯ ನಮಃ
ಓಂ ಅನಘಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ಮಹೀಧಾರಿಣೇ ನಮಃ
||೨೦||
ಓಂ ಕಾಮದಾಯಿನೇ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಕುಂಡಪ್ರಭಾಯ ನಮಃ
ಓಂ ಬಹುಶಿರಸೇ ನಮಃ
ಓಂ ದಕ್ಷಾಯ ನಮಃ
ಓಂ ದಾಮೋದರಾಯ ನಮಃ
ಓಂ ಅಕ್ಷರಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಮಹಾಸೇನಾಯ ನಮಃ
ಓಂ ಪುಣ್ಯಮೂರ್ತಯೇ ನಮಃ
ಓಂ ಗಣಪ್ರಿಯಾಯ ನಮಃ
||೩೦||
ಓಂ ವರಪ್ರದಾಯ ನಮಃ
ಓಂ ವಾಯುಭಕ್ಷಕಾಯ ನಮಃ
ಓಂ ವಿಶ್ವಧಾರಿಣೇ ನಮಃ
ಓಂ ವಿಹಂಗಮಾಯ ನಮಃ
ಓಂ ಪುತ್ರಪ್ರದಾಯ ನಮಃ
ಓಂ ಪುಣ್ಯರೂಪಾಯ ನಮಃ
ಓಂ ಬಿಲೇಶಾಯ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪಶುಪತಯೇ ನಮಃ
ಓಂ ಪವನಾಶಿನೇ ನಮಃ
||40||
ಓಂ ಬಲಪ್ರದಾಯ ನಮಃ
ಓಂ ದಾಮೋದರಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಯಾರೂಪಾಯ ನಮಃ
ಓಂ ಧನಪ್ರದಾಯ ನಮಃ
ಓಂ ಮತಿದಾಯಿನೇ ನಮಃ
ಓಂ ಮಹಾಮಾಯನೇ ನಮಃ
ಓಂ ಮಧುವೈರಿಣೇ ನಮಃ
ಓಂ ಮಹೋರಗಾಯ ನಮಃ
ಓಂ ಭುಜಗೇಶಾಯ ನಮಃ
ಓಂ ಭೂಮರೂಪಾಯ ನಮಃ ||೫೦||
ಓಂ ಭೀಮಕಾಮಾಯ ನಮಃ
ಓಂ ಭಯಾಪಹತೇ ನಮಃ
ಓಂ ಸಕಲರೂಪಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶುಭಪ್ರದಾಯ ನಮಃ
ಓಂ ಸಂತಾನದಾಯನೇ ನಮಃ
ಓಂ ಸರ್ಪೇಶಾಯ ನಮಃ
ಓಂ ಸವದಾಯನೇ ನಮಃ
ಓಂ ಸರೀಸೃಪಾಯ ನಮಃ
||೬೦||
ಓಂ ಲಕ್ಷ್ಮೀಕರಾಯ ನಮಃ
ಓಂ ಲಾಭದಾಯಿನೇ ನಮಃ
ಓಂ ಲಲಿತಾಯ ನಮಃ
ಓಂ ಲಕ್ಷ್ಮಣಾಕೃತಯೇ ನಮಃ
ಓಂ ದಯಾರಾಶಯೇ ನಮಃ
ಓಂ ದಾಶರಥಾಯ ನಮಃ
ಓಂ ದಾಶರಥಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಮಾಶ್ರಮಾಯ ನಮಃ
ಓಂ ರಮ್ಯರೂಪಾಯ ನಮಃ
ಓಂ ರಾಮಭಕ್ತಾಯ ನಮಃ
ಓಂ ರಾಮಭಕ್ತಾಯ ನಮಃ
||೭೦||
ಓಂ ರಣಧೀರಾಯ ನಮಃ
ಓಂ ರತಿಪ್ರದಾಯ ನಮಃ
ಓಂ ಸೌಮಿತ್ರಿಯೇ ನಮಃ
ಓಂ ಸೋಮಸಂಕಾಶಾಯ ನಮಃ
ಓಂ ಸರ್ಪರಾಜಾಯ ನಮಃ
ಓಂ ಸತಾಂಪ್ರಿಯಾಯ ನಮಃ
ಓಂ ಕರ್ಬುರಾಯ ನಮಃ
ಓಂ ಕಾಮಫಲಪ್ರದಾಯ ನಮಃ
ಓಂ ಕಿರೀಟಿನೇ ನಮಃ
ಓಂ ಕಿನ್ನರಾರ್ಚಿತಾಯ ನಮಃ
||೮೦||
ಓಂ ಪಾತಾಳವಾಸಿನೇ ನಮಃ
ಓಂ ಪರಾಯ ನಮಃ
ಓಂ ಫಣಿಮಂಡಲಮಂಡಿತಾಯ ನಮಃ
ಓಂ ಆಶೀವಿಷಾಯ ನಮಃ
ಓಂ ವಿಷಧರಾಯ ನಮಃ
ಓಂ ಭಕ್ತನಿಧಯೇ ನಮಃ
ಓಂ ಭೂಮಿಧಾರಿಣೇ ನಮಃ
ಓಂ ಭವಪ್ರಿಯಾಯ ನಮಃ
ಓಂ ನಾರಾಯಣಾಯ ನಮಃ
ಓಂ ನಾಗರಾಜಾಯ ನಮಃ
ಓಂ ನಾನಾರೂಪಾಯ ನಮಃ
||೯೦||
ಓಂ ಜನಪ್ರಿಯಾಯ ನಮಃ
ಓಂ ಕಾಕೋದರಾಯ ನಮಃ
ಓಂ ಕಾವ್ಯರೂಪಾಯ ನಮಃ
ಓಂ ಕಲ್ಯಾಣಾಯ ನಮಃ
ಓಂ ಕಾಮಿತಾರ್ಥದಾಯಿನೇ ನಮಃ
ಓಂ ಹತಾಸುರಾಯ ನಮಃ
ಓಂ ಹಲ್ಯಹೀನಾಯ ನಮಃ
ಓಂ ಹರ್ಷದಾಯನೇ ನಮಃ
ಓಂ ಹರಭೂಷಣಾಯ ನಮಃ
ಓಂಜಗದಾಧಾರಯೇ ನಮಃ
ಓಂ ಜರಾಹೀನಾಯ ನಮಃ
ಓಂ ಜಾತಿಶೂನ್ಯಾಯ ನಮಃ
ಓಂ ಜಗನ್ಮಯಾಯ ನಮಃ
ಓಂ ವಂಧ್ಯಾತ್ವದೋಷ ಶಮನಾಯ ನಮಃ
ಓಂ ವರಪುತ್ರಫಲಪ್ರದಾಯ ನಮಃ
ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ ||108||
ಇತಿ ಶ್ರೀ ನಾಗರಾಜ ಅಷ್ಟೋತ್ತರ ಸಂಪೂರ್ಣಂ ..

Tags: #Saaksha TVKannadaNagara Panchami
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

by Shwetha
April 2, 2026
0

ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್‌ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

by Shwetha
April 2, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಅಸಾಧ್ಯ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಬಹುತೇಕರು ತಮ್ಮ ಫೋನ್‌ಗಳಲ್ಲಿ ಎರಡು ಸಿಮ್...

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

by Shwetha
April 2, 2026
0

ರಾಜ್ಯದಲ್ಲಿ ನೀತಿ ಸಂಹಿತೆ ಮುಗಿದ ತಕ್ಷಣ ಒಳಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ K. H. ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ...

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

by Shwetha
April 2, 2026
0

ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಮೂರನೇ ಬಾರಿ...

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

by Shwetha
April 2, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದರೆ, ವಿರೋಧ ಪಕ್ಷಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram