ದಾಖಲೆ, ಮಾಹಿತಿ ಇಲ್ಲದೇ ಆರೋಪ ಹೊರಿಸುವುದು ಸರಿಯಲ್ಲ : ನಳೀನ್ ಕುಮಾರ್ ಕಟೀಲ್
ಬಾಗಲಕೋಟೆ : ಸರ್ಕಾರದಲ್ಲಿ ದುಡ್ಡಿಲ್ಲ, ಗುತ್ತಿಗೆದಾರರಿಗೆ ಬಿಲ್ ಆಗ್ತಿಲ್ಲ ಎನ್ನುವ ವಿಚಾರಕ್ಕೆ ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ..
ಯಾವುದೇ ಅಧ್ಯಕ್ಷ ಸಂಘಟನೆ ಇರಲಿ, ದಾಖಲೆ, ಮಾಹಿತಿ ಇಲ್ಲದೇ ಆರೋಪ ಮಾಡುವುದು ಸರಿಯಿಲ್ಲ. ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ..
ಅಲ್ಲದೇ ಗ್ರಾ..ಪಂ ಗಳಿಗೆ ತಲಾ ೪೦ ಲಕ್ಷ ಕೋಟಿ ರೂಪಾಯಿ ಕೊಡುತ್ತೇವೆ ಎಂಬ ತಮ್ಮದೇ ಹೇಳಿಕೆ ವೈರಲ್ ಆಗುತ್ತಿರುವ ವಿಚಾರವಾಗಿ ಮಾತನಾಡಿ ಆ ಮಾಹಿತಿ, ವರದಿ ತರಿಸಿಕೊಳ್ಳಿ, ನಾನೇನು ಹೇಳಿದ್ದೀನಿ… ಪ್ರತಿ ಪಂಚಾಯ್ತಿಗೆ ಒಂದು ಕೋಟಿ, 15ನೇ ಹಣಕಾಸಿನ ಅಡಿ ಅಭಿವೃದ್ಧಿಗೆ ಒಂದು ಕೋಟಿ ಕೊಟ್ಟಿದೆ. ಆದ್ರೆ ನಾನು ಆ ರೀತಿ ಹೇಳಿಲ್ಲ ಎಂದಿದ್ದಾರೆ..
ಇನ್ನೂ ಎಸಿಬ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾದ ವಿಚಾರವಾಗಿ ಮಾತನಾಡಿ , ಪಾರದರ್ಶಕವಾಗಿ ಎಸಿಬಿ ಅದರದೇ ಆದ ವ್ಯವಸ್ಥೆಯಲ್ಲಿ ಕ್ರಮ ಜರಗಿಸುತ್ತೆ. ಹಾಗಾಗಿ ಯಾರೇ ಭ್ರಷ್ಟಾಚಾರ ಮಾಡಿದ್ರೆ ಉಳಿಗಾಲ ಇಲ್ಲ ಎನ್ನುವ ಭಯ ಸೃಷ್ಟಿಯಾಗಿದೆ ಎಂದಿದ್ದಾರೆ..
ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ : ಸಿದ್ದರಾಮಯ್ಯ








